ADVERTISEMENT

ರೂಪದರ್ಶಿಗೆ ₹2 ಕೋಟಿ ಪರಿಹಾರ: ಆದೇಶ ತಳ್ಳಿಹಾಕಿದ ಸುಪ್ರೀಂ ಕೋರ್ಟ್

ಪಿಟಿಐ
Published 8 ಫೆಬ್ರುವರಿ 2023, 11:42 IST
Last Updated 8 ಫೆಬ್ರುವರಿ 2023, 11:42 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ರೂಪದರ್ಶಿಯೊಬ್ಬರಿಗೆ ₹2 ಕೋಟಿ ಪರಿಹಾರ ನೀಡುವ ಸಂಬಂಧ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು (ಎನ್‌ಸಿಡಿಆರ್‌ಸಿ) 2021ರ ಸೆಪ್ಟೆಂಬರ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಳ್ಳಿಹಾಕಿದೆ.

ಎನ್‌ಸಿಡಿಆರ್‌ಸಿ ಆದೇಶವನ್ನು ಪ್ರಶ್ನಿಸಿ ಐಟಿಸಿ ಲಿಮಿಟೆಡ್‌, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಹಾಗೂ ವಿಕ್ರಂ ನಾಥ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಇದರ ವಿಚಾರಣೆ ನಡೆಸಿತು.

‘ತನಗೆ ಆಗಿರುವ ಅನ್ಯಾಯವನ್ನು ಸಾಬೀತುಪಡಿಸಲು ಅಗತ್ಯವಿರುವ ಸಾಕ್ಷ್ಯಗಳನ್ನು ಸಲ್ಲಿಸಲು ಮಹಿಳೆಗೆ ಅವಕಾಶ ನೀಡಿ. ಅವುಗಳ ಆಧಾರದಲ್ಲಿ ಮತ್ತೊಮ್ಮೆ ಸೂಕ್ತ ತೀರ್ಮಾನ ಕೈಗೊಳ್ಳಿ’ ಎಂದು ನ್ಯಾಯಪೀಠವು ಎನ್‌ಸಿಡಿಆರ್‌ಸಿಗೆ ಸೂಚಿಸಿತು.

ADVERTISEMENT

ರೂಪದರ್ಶಿ ಆಶ್ನಾ ರಾಯ್‌ ಎಂಬುವರು 2018ರಲ್ಲಿ ಐಟಿಸಿ ಮೌರ್ಯ ಹೋಟೆಲ್‌ನ ಸಲೂನ್‌ನಲ್ಲಿ ಕೇಶವಿನ್ಯಾಸ ಮಾಡಿಸಿಕೊಂಡಿದ್ದರು. ಕ್ಷೌರಿಕನು ತನ್ನ ಸೂಚನೆ ಪಾಲಿಸದೆ ಬೇಕಾಬಿಟ್ಟಿ ತಲೆಕೂದಲು ಕತ್ತರಿಸಿದ್ದಾನೆ. ಇದರಿಂದಾಗಿ ವಿವಿಧ ಕಂಪನಿಗಳು ತನ್ನೊಂದಿಗಿನ ಒಪ್ಪಂದ ರದ್ದುಪಡಿಸಿವೆ. ಇದರಿಂದ ತನ್ನ ಆದಾಯಕ್ಕೂ ಪೆಟ್ಟುಬಿದ್ದಿದೆ ಎಂದು ಆಶ್ನಾ, ಎನ್‌ಸಿಡಿಆರ್‌ಸಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.