ADVERTISEMENT

15 ಗಂಟೆ ಸುರೇಂದ್ರ ಪನ್ವಾರ್ ವಿಚಾರಣೆ: ಇ.ಡಿ ವರ್ತನೆಗೆ ಸುಪ್ರೀಂ ಕೋರ್ಟ್‌ ಕಿಡಿ

ಪಿಟಿಐ
Published 3 ಜನವರಿ 2025, 13:47 IST
Last Updated 3 ಜನವರಿ 2025, 13:47 IST
–
   

ನವದೆಹಲಿ: ಹರಿಯಾಣದ ಕಾಂಗ್ರೆಸ್‌ನ ಮಾಜಿ ಶಾಸಕ ಸುರೇಂದ್ರ ಪನ್ವಾರ್ ಅವರನ್ನು 15 ಗಂಟೆ ವಿಚಾರಣೆಗೆ ಒಳಪಡಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ‘ದರ್ಪ’ದಿಂದ ಕೂಡಿದೆ ಹಾಗೂ ‘ಅಮಾನವೀಯ’ವಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಮಾಜಿ ಶಾಸಕನ ಬಂಧನ ಕಾನೂನುಬಾಹಿರ ಎಂದು ಹೇಳಿದೆ.

‘ಪನ್ವಾರ್‌ ವಿರುದ್ಧ ಮರಳು ಅಕ್ರಮ ಗಣಿಗಾರಿಕೆ ಆರೋಪವಿದೆಯೇ ಹೊರತು, ಅವರ ವಿರುದ್ಧದ ಪ್ರಕರಣ ಯಾವುದೇ ಭಯೋತ್ಪಾದಕ ಚಟುವಟಿಕೆಗೆ ಸಂಬಂಧಿಸಿದ್ದಲ್ಲ. ಈ ವಿಚಾರದಲ್ಲಿ ಇ.ಡಿ ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡಿದ್ದಾರೆ’ ಎಂದು ನ್ಯಾಯಮೂರ್ತಿಗಳಾದ ಅಭಯ್‌ ಎಸ್.ಓಕಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್‌ ಅವರು ಇದ್ದ ಪೀಠ ಹೇಳಿದೆ.

ಪೀಠವು ಈ ಕುರಿತು ಡಿಸೆಂಬರ್ 2ರಂದು ಆದೇಶ ಹೊರಡಿಸಿದೆ.

ADVERTISEMENT

‘ಇಂತಹ ಪ್ರಕರಣಗಳಲ್ಲಿ ಜನರನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ಹೇಳಿಕೆ ನೀಡುವಂತೆ ಆ ವ್ಯಕ್ತಿಗೆ ನೀವು ಬಲವಂತ ಮಾಡಿದ್ದೀರಿ’ ಎಂದೂ ಕಟು ಮಾತುಗಳಲ್ಲಿ ಹೇಳಿದೆ.

ಪನ್ವಾರ್‌ ಅವರ ಬಂಧನ ಕಾನೂನುಬಾಹಿರ ಎಂದು ಹರಿಯಾಣ ಮತ್ತು ಪಂಜಾಬ್‌ ಹೈಕೋರ್ಟ್‌ ಆದೇಶಿಸಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಇ.ಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ‘ಪ್ರತಿವಾದಿಯ ಬಂಧನ ಕಾನೂನುಬಾಹಿರ ಎಂಬ ಹೈಕೋರ್ಟ್‌ನ ನಿರ್ಣಯದಲ್ಲಿ ನಾವು ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.