ADVERTISEMENT

ಆಜಂ ಖಾನ್‌: ಅಲಹಾಬಾದ್‌ ಹೈಕೋರ್ಟ್‌ ಜಾಮೀನು ಷರತ್ತಿಗೆ ‘ಸುಪ್ರೀಂ’ ತಡೆ

ಕೋರ್ಟ್‌ ಷರತ್ತುಗಳು ಅಸಮಂಜಸವಾಗಿವೆ: ಸುಪ್ರೀಂಕೋರ್ಟ್‌

ಪಿಟಿಐ
Published 27 ಮೇ 2022, 14:15 IST
Last Updated 27 ಮೇ 2022, 14:15 IST
ಆಜಂ ಖಾನ್‌ –ಪಿಟಿಐ
ಆಜಂ ಖಾನ್‌ –ಪಿಟಿಐ   

ನವದೆಹಲಿ:ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಶಾಸಕ ಆಜಂಖಾನ್ ಅವರ ಮೇಲೆ ಅಲಹಾಬಾದ್‌ ಹೈಕೋರ್ಟ್‌ ವಿಧಿಸಿರುವ ಜಾಮೀನು ನಿಬಂಧನೆಗಳಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಈ ಮೂಲಕ ಆಜಂಖಾನ್‌ಒತ್ತುವರಿ ಮಾಡಿದ್ದಾರೆ ಎನ್ನಲಾದಜೌಹಾರ್‌ ವಿಶ್ವವಿದ್ಯಾಲಯದ ಭೂಮಿಯನ್ನು ವಶಕ್ಕೆ ಪಡೆಯುವಂತೆ ರಾಂಪುರ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿದ್ದ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ಬೇಲಾ ಎಂ.ತ್ರಿವೇದಿ ನೇತೃತ್ವದ ರಜೆ ಕಾಲದ ಪೀಠವು, ‘ಮೇಲ್ನೋಟಕ್ಕೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ವಿಧಿಸಿರುವ ಷರತ್ತುಗಳು ಅಸಮಂಜಸವಾಗಿವೆ. ಆರೋಪಿಯ ಉಪಸ್ಥಿತಿ ಮತ್ತು ವಿಚಾರಣೆಯ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ವಿಧಿಸಬೇಕಾದ ಷರತ್ತುಗಳೊಂದಿಗೆ ಸಮಂಜಸ ಸಂಬಂಧವನ್ನು ಹೊಂದಿಲ್ಲ. ಇದು ಸಿವಿಲ್‌ ನ್ಯಾಯಾಲಯದ ತೀರ್ಪಿನಂತೆ ಧ್ವನಿಸುತ್ತಿದೆ’ ಎಂದು ಚಾಟಿ ಬೀಸಿದೆ.

ADVERTISEMENT

ಮೇ 10ರಂದು ಅಲಹಾಬಾದ್‌ ಹೈಕೋರ್ಟ್‌ ಆಜಂಖಾನ್‌ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.