ADVERTISEMENT

16 ಬಾಲಿಕಾಗೃಹಗಳ ಪ್ರಕರಣ ಸಿಬಿಐಗೆ

ಪಿಟಿಐ
Published 28 ನವೆಂಬರ್ 2018, 20:36 IST
Last Updated 28 ನವೆಂಬರ್ 2018, 20:36 IST

ನವದೆಹಲಿ: ಬಿಹಾರದ 16 ಬಾಲಿಕಾ ಗೃಹಗಳಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಗಳ ತನಿಖೆಯನ್ನುಸಿಬಿಐ ವಹಿಸಿಕೊಳ್ಳಬೇಕೆಂದು ನಿರ್ದೇಶಿಸಿ ಸುಪ್ರೀಂ ಕೋರ್ಟ್ ಬುಧವಾರಆದೇಶ ಹೊರಡಿಸಿದೆ.

ಸಿಬಿಐ ಈಗಾಗಲೇ ಮುಜಫ್ಫರ್‌ಪುರ ಬಾಲಿಕಾಗೃಹ ಪ್ರಕರಣದ ತನಿಖೆ ನಡೆಸುತ್ತಿದೆ.

ಉಳಿದ 16 ಪ್ರಕರಣಗಳಲ್ಲೂ ತನಿಖೆ ನಡೆಸಲು ಸಿದ್ಧವಿರುವುದಾಗಿ ನ್ಯಾಯಾಲಯಕ್ಕೆ ಸಿಬಿಐ ತಿಳಿಸಿತು.

ADVERTISEMENT

ಪ್ರಸ್ತುತ, ಬಿಹಾರ ಪೊಲೀಸರು ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.

ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್, ಎಸ್.ಎ. ನಜೀರ್ ಹಾಗೂ ದೀಪಕ್‌ ಗುಪ್ತಾ ನೇತೃತ್ವದ ನ್ಯಾಯಪೀಠ, ‘ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್ ಅನುಮತಿ ಇಲ್ಲದೆ ವರ್ಗಾವಣೆ ಮಾಡುವಂತಿಲ್ಲ’ ಎಂದು ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.