ADVERTISEMENT

ಲೆಗ್ಗಿಂಗ್ಸ್ ಧರಿಸಿದ ಶಿಕ್ಷಕಿಗೆ ಮಾನಸಿಕ ಕಿರುಕುಳ: ಪ್ರಾಂಶುಪಾಲೆ ವಿರುದ್ಧ ದೂರು

ಪಿಟಿಐ
Published 1 ಡಿಸೆಂಬರ್ 2022, 14:36 IST
Last Updated 1 ಡಿಸೆಂಬರ್ 2022, 14:36 IST

ಮಲಪ್ಪುರಂ (ಕೇರಳ): ಕ್ಯಾಂಪಸ್‌ನಲ್ಲಿ ಲೆಗ್ಗಿಂಗ್ಸ್ ಧರಿಸಿದ್ದಕ್ಕಾಗಿ ಪ್ರಾಂಶುಪಾಲರು ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಆರೋಪಿಸಿಜಿಲ್ಲಾ ಶಿಕ್ಷಣಾಧಿಕಾರಿಗೆ (ಡಿಇಒ) ದೂರು ನೀಡಿದ್ದಾರೆ.

ಇತ್ತೀಚಿಗಷ್ಟೇ ‍‍ಹಾಜರಾತಿಗೆ ಸಹಿ ಹಾಕಲು ಪ್ರಾಂಶುಪಾಲೆ ಕೊಠಡಿಗೆ ಹೋದಾಗ, ‘ಲೆಗ್ಗಿಂಗ್ಸ್‌ ಅಸಭ್ಯವಾದ ಉಡುಪು. ಶಿಕ್ಷಕರೇ ಈ ರೀತಿಯ ಉಡುಪು ಧರಿಸಿ ಬಂದರೆ, ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರಲು ಹೇಗೆ ಹೇಳುತ್ತಾರೆ ಎಂದಿದ್ದಾರೆ. ಇದರಿಂದ ನನಗೆ ಬಹಳ ನೋವಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಶಿಕ್ಷಕರು ಯಾವುದೇ ಸಭ್ಯ ಮತ್ತು ಆರಾಮದಾಯಕ ಉಡುಪನ್ನು ಧರಿಸಬಹುದು ಎಂಬ ಸರ್ಕಾರದ ನಿಯಮ ಜಾರಿಯಲ್ಲಿರುವಾಗಲೇ ಪ್ರಾಂಶುಪಾಲರು ಇಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ’ ಎಂದು ಶಿಕ್ಷಕಿ ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ. ಪ್ರಾಂಶುಪಾಲರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.