ADVERTISEMENT

ರಾಜಸ್ಥಾನ | ಶಾಲಾ ವಾಹನ ಕಾರಿಗೆ ಡಿಕ್ಕಿ: 11 ವಿದ್ಯಾರ್ಥಿಗಳಿಗೆ ಗಾಯ

ಪಿಟಿಐ
Published 15 ಆಗಸ್ಟ್ 2025, 19:23 IST
Last Updated 15 ಆಗಸ್ಟ್ 2025, 19:23 IST
   

ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಶಾಲಾ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಚಾಲಕ ಸೇರಿದಂತೆ 11 ಮಕ್ಕಳು ಗಾಯಗೊಂಡಿದ್ದಾರೆ.

ಸಾಂಗೋದ್‌ನ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿಸಿ, ಮನೆಗೆ ಹಿಂದಿರುಗುವಾಗ ಈ ಅಪಘಾತ ನಡೆದಿದೆ ಎಂದು ಪೊಲೀಸ್‌ ಅಧಿಕಾರಿ ಲಖನ್‌ ಸಿಂಗ್‌ ಅವರು ತಿಳಿಸಿದ್ದಾರೆ.

ಗಾಯಗೊಂಡ ಮಕ್ಕಳು 7–15 ವರ್ಷದೊಳಗಿನವರು. ಶಾಲಾ ವಾಹನದ ಚಾಲಕನನ್ನು ರೋಹಿತ್‌ (22) ಎಂದು ಗುರುತಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.