ADVERTISEMENT

ಜಮ್ಮು–ಕಾಶ್ಮೀರ: ಪತ್ತೆಯಾಗದ ಉಗ್ರರು, ಕಾರ್ಯಾಚರಣೆ ಸ್ಥಗಿತ

Search operation to trace hiding militants called off in J-K

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 12:52 IST
Last Updated 7 ಏಪ್ರಿಲ್ 2021, 12:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಉಗ್ರರು ಪತ್ತೆಯಾಗದ ಕಾರಣ, ಶ್ರೀನಗರದ ಹೊರವಲಯದ ಗುಲಾಬ್ ಬಾಗ್‌ನಲ್ಲಿ ಭದ್ರತಾ ಪಡೆಗಳು ಕೈಗೊಂಡಿದ್ದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಉಗ್ರರು ಅಡಗಿರುವ ಮಾಹಿತಿಯ ಮೇರೆಗೆ ನಗರದ ಹೊರವಲಯದ ಗುಲಾಬ್ ಬಾಗ್‌–ಜಕುರಾ ಪ್ರದೇಶದಲ್ಲಿ ಮಂಗಳವಾರ ರಾತ್ರಿಯಿಂದಲೇ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಕೈಗೊಂಡಿದ್ದವು. ಈ ಪ್ರದೇಶದಲ್ಲಿ ಹೊರಹೋಗುವ ಮತ್ತು ಒಳಬರುವ ಮಾರ್ಗಗಳನ್ನೂ ಮುಚ್ಚಲಾಗಿತ್ತು.

ಈ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆ ಎನ್ನಲಾದ ಮನೆಯೊಂದನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ಫೈರಿಂಗ್ ಕೂಡಾ ನಡೆಸಿದವು. ಆದರೆ, ಆ ಕಡೆಯಿಂದ ಉಗ್ರರು ಇರುವ ಸುಳಿವು ದೊರೆಯಲಿಲ್ಲ. ಹಾಗಾಗಿ, ಬುಧವಾರ ಮಧ್ಯಾಹ್ನದ ಹೊತ್ತಿಗೆ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಶೋಧ ಕಾರ್ಯಾಚರಣೆಯ ಸುಳಿವು ದೊರೆತು ಉಗ್ರರು ಮೊದಲೇ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.