ಶಿಲ್ಲಾಂಗ್: ಮೇಘಾಲಯದ ಈಸ್ಟ್ ಜೈಂಟಿಯಾ ಜಿಲ್ಲೆಯ ಅಕ್ರಮ ಗಣಿಯಲ್ಲಿ ಸಿಲುಕಿಕೊಂಡಿರುವ 14 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಬುಧವಾರ ಮತ್ತೆ ಆರಂಭವಾಗಿದೆ. ಭಾರಿ ಮಳೆ ಮತ್ತು ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಕಾರ್ಯಾಚರಣೆಗೆ ತೊಡಕುಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಸಾನ್ ಪ್ರದೇಶದ ಲುಮ್ತಾರಿ ಗ್ರಾಮದ ಗಣಿಯ ಒಳಗೆ ನದಿಯೊಂದರ ನೀರು ನುಗ್ಗಿದ್ದರಿಂದ ಇದೇ 13 ರಂದು ಕಾರ್ಮಿಕರು ಸಿಲುಕಿಕೊಂಡಿದ್ದರು. ಎಷ್ಟು ಕಾರ್ಮಿಕರು ಸಿಲುಕಿದ್ದಾರೆ ಎಂಬುದು ಇನ್ನೂ ಖಚಿತಗೊಂಡಿಲ್ಲ. ಏಕೆಂದರೆ ಕಾರ್ಮಿಕರ ಬಗ್ಗೆ ಗಣಿ ಮಾಲೀಕರು ಸರಿಯಾದ ದಾಖಲೆಗಳನ್ನು ಇಟ್ಟುಕೊಂಡಿಲ್ಲ.
370 ಅಡಿ ಆಳದ ಗಣಿಯ ಒಳಗೆ ನದಿಯ ನೀರು ನುಗ್ಗುತ್ತಿರುವುದರಿಂದ ಕಾರ್ಮಿಕರೆಲ್ಲ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.