ADVERTISEMENT

ಕೋವಿಶೀಲ್ಡ್‌: 8 ವಾರಗಳ ನಂತರ 2ನೇ ಡೋಸ್‌ಗೆ ಶಿಫಾರಸು

ಎರಡು ಡೋಸ್‌ಗಳ ನಡುವಿನ ಅಂತರ ಕಡಿಮೆಗೊಳಿಸಿದ ಎನ್‌ಟಿಎಜಿಐ

ಪಿಟಿಐ
Published 20 ಮಾರ್ಚ್ 2022, 11:12 IST
Last Updated 20 ಮಾರ್ಚ್ 2022, 11:12 IST
ಲಸಿಕೆ
ಲಸಿಕೆ   

ನವದೆಹಲಿ: ಕೋವಿಡ್‌ ಲಸಿಕೆ ಕೋವಿಶೀಲ್ಡ್‌ನ ಮೊದಲ ಡೋಸ್‌ ನೀಡಿದ ನಂತರ 8–16 ವಾರಗಳ ಅವಧಿಯಲ್ಲಿ ಎರಡನೇ ಡೋಸ್‌ ನೀಡಬಹುದು ಎಂದು ಕೋವಿಡ್‌–19 ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಶಿಫಾರಸು ಮಾಡಿದೆ.

ಪ್ರಸ್ತುತ, ಕೋವಿಶೀಲ್ಡ್‌ನ ಮೊದಲ ಡೋಸ್‌ ನೀಡಿದ ನಂತರ 12–16 ವಾರಗಳ ಅವಧಿಯಲ್ಲಿ ಎರಡನೇ ಡೋಸ್‌ ನೀಡಲಾಗುತ್ತಿದೆ.

ಕೋವಿಶೀಲ್ಡ್‌ ಲಸಿಕೆಗೆ ಸಂಬಂಧಿಸಿದ ಈ ಶಿಫಾರಸನ್ನು ರಾಷ್ಟ್ರೀಯ ಕೋವಿಡ್‌–19 ಲಸಿಕೆ ಕಾರ್ಯಕ್ರಮದಡಿ ಇನ್ನೂ ಅನುಷ್ಠಾನಗೊಳಿಸಿಲ್ಲ.

ADVERTISEMENT

ಆದರೆ, ಭಾರತ್ ಬಯೋಟೆಕ್‌ ಉತ್ಪಾದಿಸುವ ಕೋವ್ಯಾಕ್ಸಿನ್‌ ಲಸಿಕೆಯ ಮೊದಲ ಡೋಸ್‌ ನೀಡಿದ 28 ದಿನಗಳ ನಂತರ ಎರಡನೇ ಡೋಸ್‌ ನೀಡಲಾಗುತ್ತಿದೆ. ಈ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಬದಲಾಯಿಸುವುದಕ್ಕೆ ಸಂಬಂಧಿಸಿ ಎನ್‌ಟಿಎಜಿಐ ಯಾವುದೇ ಶಿಫಾರಸು ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.