ADVERTISEMENT

ಜಮ್ಮು–ಕಾಶ್ಮಿರದಲ್ಲಿ ಸಕ್ರಿಯವಾಗಿದ್ದಾರೆ 38 ಪಾಕಿಸ್ತಾನಿ ಉಗ್ರರು

ಐಎಎನ್ಎಸ್
Published 13 ನವೆಂಬರ್ 2021, 5:00 IST
Last Updated 13 ನವೆಂಬರ್ 2021, 5:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ 38 ಪಾಕಿಸ್ತಾನಿ ಭಯೋತ್ಪಾದಕರು ಸಕ್ರಿಯವಾಗಿರುವುದನ್ನು ಭದ್ರತಾ ಪಡೆ ಗುರುತಿಸಿದೆ. ಅವರನ್ನು ಮಟ್ಟಹಾಕಲು ಶೀಘ್ರದಲ್ಲೇ ಸಂಘಟಿತ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

38 ಉಗ್ರರ ಪೈಕಿ 27 ಮಂದಿ ಲಷ್ಕರ್-ಎ-ತೈಬಾ (ಎಲ್‌ಇಟಿ)ಗೆ ಸೇರಿದವರಾಗಿದ್ದರೆ, 11 ಮಂದಿ ಜೈಶ್-ಎ ಮೊಹಮ್ಮದ್ (ಜೆಇಎಂ) ಸಂಘನೆಗೆ ಸೇರಿದವರು. ಇವರೆಲ್ಲರ ಮೇಲೆ ಭದ್ರತಾ ಪಡೆ ತೀವ್ರ ನಿಗಾ ವಹಿಸಿದೆ ಎನ್ನಲಾಗಿದೆ.

ಶ್ರೀನಗರ, ಪುಲ್ವಾಮಾ, ಬಾರಾಮುಲ್ಲಾ ಮತ್ತು ಕುಲ್ಗಾಮ್ ಮತ್ತು ಕಣಿವೆಯ ಇತರ ಭಾಗಗಳಲ್ಲಿ ಈ ಉಗ್ರರು ಇದ್ದಾರೆ. ಇನ್ನೂ ಕೆಲ ಮಂದಿ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಎಂದೂ ಗೊತ್ತಾಗಿದೆ.

ADVERTISEMENT

ಅಕ್ಟೋಬರ್‌ನಲ್ಲಿ ಕಣಿವೆ ರಾಜ್ಯದಲ್ಲಿ ನಡೆದ ನಾಗರಿಕ ಹತ್ಯೆಗಳ ನಂತರ ರಚಿಸಲಾದ ವಿಶೇಷ ತಂಡವು ಉಗ್ರರ ನಿಖರ ಸ್ಥಳಗಳನ್ನು ಪತ್ತೆ ಮಾಡುತ್ತಿದೆ. ವಿಶೇಷ ತಂಡಕ್ಕೆ ಸಾಕಷ್ಟು ನೆರವನ್ನೂ ನೀಡಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಪೊಲೀಸ್ ಏಜೆನ್ಸಿಗಳ ವಿಶೇಷ ಗುಂಪಿನಿಂದಾಗಿ ಉಗ್ರರ ಗುರುತಿಸುವಿಕೆ ಸಾಧ್ಯವಾಯಿತು. ಇದೀಗ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೋಲೀಸ್‌ರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಇತರ ಮಧ್ಯಸ್ಥಗಾರರೊಂದಿಗೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸದಾಗಿ ರಚನೆಯಾಗಿರುವ ಉಗ್ರರ ನಿಗಾ ಪಡೆಯು (ಟಿಎಂಜಿ) ಕಣಿವೆಯಲ್ಲಿನ ಭಯೋತ್ಪಾದಕರನ್ನು ಮಟ್ಟಹಾಕುವಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿದೆ.

ಒಳನುಸುಳುವಿಕೆಗಳ ಕುರಿತು ನಿಖರವಾದ ಮಾಹಿತಿ ಹೊಂದಿರುವ ಈ ಗುಂಪು, ಭಾರತದ ಗಡಿಯಲ್ಲಿ ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.