ADVERTISEMENT

ರೈಲುಗಳಲ್ಲಿನ ಶೌಚಾಲಯಗಳಲ್ಲಿ ದುರ್ವಾಸನೆ: ಇನ್ಮುಂದೆ ಅಧಿಕಾರಿಗಳಿಂದಲೇ ಪರಿಶೀಲನೆ!

ಪಿಟಿಐ
Published 28 ಜೂನ್ 2022, 19:29 IST
Last Updated 28 ಜೂನ್ 2022, 19:29 IST
   

ನವದೆಹಲಿ (ಪಿಟಿಐ): ಶೌಚಾಲಯಗಳಲ್ಲಿ ದುರ್ವಾಸನೆ ಬರುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ, ಕಾರಣ ಪತ್ತೆ ಮಾಡುವಂತೆ ಹಿರಿಯ ಅಧಿಕಾರಿಗಳನ್ನೇ ರೈಲುಗಳಿಗೆ ನಿಯೋಜಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

’ಎರಡನೇ ಹಂತದಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವಂತೆರೈಲ್ವೆ ಬೋರ್ಡ್‌ ಮಟ್ಟದಅಧಿಕಾರಿಗಳನ್ನೇ 3 ಎಸಿ ಕೋಚ್‌ ರೈಲುಗಳಿಗೆ ನಿಯೋಜಿಸಲಾಗುವುದು. ಕಳೆದ ಮೂರು ದಿನದಲ್ಲಿ ಹಿರಿಯ ಅಧಿಕಾರಿಗಳು 544 ತಪಾಸಣೆ ಪೂರ್ಣಗೊಳಿಸಿದ್ದಾರೆ‘ ಎಂದು ಅವರು ಹೇಳಿದ್ದಾರೆ.

ಶೌಚಾಲಯದಲ್ಲಿ ನೀರಿನ ಕೊರತೆ, ನೀರು ಸೋರಿಕೆ, ಶುಚಿತ್ವ ಬಗ್ಗೆ ರೈಲು ಪ್ರಯಾಣಿಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಕೇಳಿ ಬಂದಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.