ADVERTISEMENT

ಮೋದಿಗೆ ಸೋಲ್‌ ಶಾಂತಿ ಪ್ರಶಸ್ತಿ ಪ್ರದಾನ

ಪಿಟಿಐ
Published 22 ಫೆಬ್ರುವರಿ 2019, 14:32 IST
Last Updated 22 ಫೆಬ್ರುವರಿ 2019, 14:32 IST
   

ಸೋಲ್‌ : 2018ನೇ ಸಾಲಿನ ಪ್ರತಿಷ್ಠಿತ ಸೋಲ್‌ ಶಾಂತಿ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು.

ಅಂತರರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕತೆಗೆ ಉತ್ತೇಜನ ನೀಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರಶಸ್ತಿ ಮೊತ್ತ 2 ಲಕ್ಷ ಡಾಲರ್‌ (₹1.42ಕೋಟಿ) ಅನ್ನು ಗಂಗಾ ನದಿ ಸಂರಕ್ಷಣೆ ಮತ್ತು ಪುನಶ್ಚೇತನಕ್ಕಾಗಿ ರೂಪಿಸಿರುವ ‘ನಮಾಮಿ ಗಂಗೆ’ ಯೋಜನೆಗೆ ದೇಣಿಗೆ ನೀಡುವುದಾಗಿ ಮೋದಿ ತಿಳಿಸಿದರು.

ADVERTISEMENT

ವಿಶ್ವಸಂಸ್ಥೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಜನರಲ್‌ ಕೋಫಿ ಅನ್ನಾನ್‌ ಸೇರಿದಂತೆ ಇದುವರೆಗೆ 13 ಮಂದಿ ಈ ಪ್ರಶಸ್ತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಈ ಪ್ರಶಸ್ತಿ ವೈಯಕ್ತಿಕವಾಗಿ ನನಗೆ ಸಂದಿಲ್ಲ. ಭಾರತದ ಜನತೆಗೆ ಸಂದಿದೆ. ಭಾರತದ ಜನರ ಪರವಾಗಿ ಈ ಪ್ರಶಸ್ತಿ ಸ್ವೀಕರಿಸುತ್ತೇನೆ’ ಎಂದು ಹೇಳಿದರು.

‘ಜಾಗತಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆವೊಡ್ಡಿರುವ ಭಯೋತ್ಪಾದನೆ ವಿರುದ್ಧ ಜಗತ್ತು ಒಗ್ಗಟ್ಟಿನಿಂದ ಕ್ರಮಕೈಗೊಳ್ಳಬೇಕಾಗಿದೆ’ ಎಂದು ಪ್ರತಿಪಾದಿಸಿದರು.

‘ದಕ್ಷಿಣ ಕೊರಿಯಾದ ರೀತಿಯಲ್ಲಿ ಭಾರತವು ಗಡಿಯಾಚೆಗಿನ ಭಯೋತ್ಪಾದನೆ ಸಮಸ್ಯೆಯನ್ನು ಕಳೆದ 40 ವರ್ಷಗಳಿಂದ ಎದುರಿಸುತ್ತಿದೆ. ಶಾಂತಿ ಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಗಡಿಯಾಚೆಗಿನ ಭಯೋತ್ಪಾದನೆಯಿಂದ ಹಿನ್ನಡೆಯಾಗಿದೆ’ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.