ADVERTISEMENT

ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್ಸ್‌ ನಾಯಕರ ಬಂಧನ

ಪಿಟಿಐ
Published 12 ಜುಲೈ 2020, 7:07 IST
Last Updated 12 ಜುಲೈ 2020, 7:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್ಸ್‌ನ ನಾಯಕ ಅಶ್ರಫ್‌ ಸೆಹರಾಯಿ ಹಾಗೂ ನಿಷೇಧಿತ ಜಮಾತ್ ಎ–ಇಸ್ಲಾಮಿ ಸಂಘಟನೆಯ ಹಲವು ನಾಯಕರನ್ನು ಬಂಧಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬರ್‌ ಸಿಂಗ್‌ ಅವರು ಭಾನುವಾರ ತಿಳಿಸಿದ್ದಾರೆ.

ಈ ಆರೋಪಿಗಳ ವಿರುದ್ಧ ಸಾರ್ವಜನಿಕ ಭದ್ರತಾ ಕಾಯ್ದೆಯಡಿ ದೂರು ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೆಹರಾಯಿಯು ಪಾಕಿಸ್ತಾನ ಪರ ಕೆಲಸ ಮಾಡುವ ತೆಹರೀಕ್‌ ಎ– ಹುರಿಯತ್‌ ಸಂಘಟನೆಯ ಅಧ್ಯಕ್ಷ. ಈತನಲ್ಲದೆ ಜಮಾತ್‌ ಎ–ಇಸ್ಲಾಂನ ಸುಮಾರು 12 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ADVERTISEMENT

ಪ್ರತ್ಯೇಕತಾವಾದಿ ನಾಯಕ ಸಯ್ಯದ್‌ಅಲಿ ಶಾ ಗಿಲಾನಿ ಇತ್ತೀಚೆಗಷ್ಟೇ ರಾಜಕೀಯದಿಂದ ಸಂಪೂರ್ಣ ನಿವೃತ್ತಿ ಘೋಷಿಸಿದ್ದರು. ಅವರಿಂದ ತೆರವಾಗಿದ್ದ ಅಧ್ಯಕ್ಷ ಹುದ್ದೆಯನ್ನು ಸೆಹರಾಯಿ ತುಂಬಿದ್ದ. ಪ್ರತ್ಯೇಕತಾವಾದಿ 26 ಪಕ್ಷಗಳ ಒಕ್ಕೂಟ ಆಲ್‌ಪಾರ್ಟಿ ಹುರಿಯತ್‌ ಕಾನ್ಫರೆನ್ಸ್‌ನಲ್ಲಿ ಸೆಹರಾಯಿ ತಹರೀಕ್‌ ಎ–ಹುರಿಯತ್‌ ಸಂಘಟನೆಯನ್ನು ಪ್ರತಿನಿಧಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.