ADVERTISEMENT

ಗೃಹ ಸಚಿವ ಅಮಿತ್‌ ಶಾ ಗುಣಮುಖ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 14:21 IST
Last Updated 29 ಆಗಸ್ಟ್ 2020, 14:21 IST
ಅಮಿತ್‌ ಶಾ 
ಅಮಿತ್‌ ಶಾ    

ನವದೆಹಲಿ: ಕೋವಿಡ್‌–19ನಿಂದ ಗುಣಮುಖರಾದ ಬಳಿಕ ಹೆಚ್ಚಿನ ಆರೈಕೆಗಾಗಿ ಇಲ್ಲಿನ ಏಮ್ಸ್‌ಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿದ್ದು, ಶೀಘ್ರದಲ್ಲೇ ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆಯು ಶನಿವಾರ ತಿಳಿಸಿದೆ.

ಅಮಿತ್‌ ಶಾ ಅವರಿಗೆ ಆ.2ರಂದು ಕೋವಿಡ್‌ ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದ ಶಾ ಅವರಿಗೆ ನಾಲ್ಕು ದಿನಗಳ ಬಳಿಕ ( ಆ.18) ಮೈಕೈನೋವು, ಆಯಾಸ ಕಂಡುಬಂದಿತ್ತು. ಈ ಕಾರಣದಿಂದ ಅವರನ್ನು ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT