ADVERTISEMENT

ಜಾಮಿಯಾ ಗಲಭೆ: ಶರ್ಜೀಲ್‌ ಇಮಾಮ್‌ ವಿರುದ್ಧ ದೇಶದ್ರೋಹ ಆರೋಪದಡಿ ಜಾರ್ಜ್‌ಶೀಟ್

ಪಿಟಿಐ
Published 18 ಏಪ್ರಿಲ್ 2020, 12:30 IST
Last Updated 18 ಏಪ್ರಿಲ್ 2020, 12:30 IST
ಶರ್ಜೀಲ್‌ ಇಮಾಮ್‌
ಶರ್ಜೀಲ್‌ ಇಮಾಮ್‌   

ನವದೆಹಲಿ: ಜೆಎನ್‌ಯು ಮಾಜಿ ವಿದ್ಯಾರ್ಥಿ ಶರ್ಜೀಲ್‌ ಇಮಾಮ್‌ ವಿರುದ್ಧ ದೇಶದ್ರೋಹ ಆರೋಪದ ಅಡಿಯಲ್ಲಿ ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಿದ್ದಾರೆ.

‘ಶರ್ಜೀಲ್‌ ಮಾಡಿದ ಭಾಷಣ ಜನರ ನಡುವೆ ದ್ವೇಷಕ್ಕೆ ಪ್ರಚೋದನೆ ನೀಡಿದ್ದು, ಇದರಿಂದಾಗಿಯೇ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಗಲಭೆ ನಡೆಯಿತುʼ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

‘ಡಿಸೆಂಬರ್ 13ರಂದು ಆತ ಮಾಡಿದ್ದ ಭಾಷಣದಲ್ಲಿ ದೇಶದ್ರೋಹದ ಅಂಶಗಳಿದ್ದವು. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್‌ 124ಎ (ದೇಶದ್ರೋಹ) ಹಾಗೂ 153ಎ (ಜನರ ನಡುವೆ ದ್ವೇಷ ಮೂಡಿಸುವುದು) ಅಡಿ ಪ್ರಕರಣ ದಾಖಲಿಸಿ ಇಮಾಮ್‌ ಅವರನ್ನು ಬಂಧಿಸಲಾಗಿತ್ತುʼ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಡಿಸೆಂಬರ್ 15ರಂದು ಆಯೋಜಿಸಿದ್ದ ಪ್ರತಿಭಟನಾ ರ್‍ಯಾಲಿಯ ಪರಿಣಾಮವಾಗಿ ಗಂಭೀರ ಗಲಭೆ ನಡೆದಿತ್ತುʼ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.