ADVERTISEMENT

‘ವೈಎಸ್ಆರ್ ತೆಲಂಗಾಣ ಪಾರ್ಟಿ’ ಆರಂಭಿಸಿದ ವೈ.ಎಸ್‌.ಶರ್ಮಿಳಾ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 16:26 IST
Last Updated 8 ಜುಲೈ 2021, 16:26 IST
ವೈ.ಎಸ್‌.ಶರ್ಮಿಳಾ
ವೈ.ಎಸ್‌.ಶರ್ಮಿಳಾ    

ಹೈದರಾಬಾದ್‌: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ತಂಗಿ, ವೈ.ಎಸ್‌.ಶರ್ಮಿಳಾ ಗುರುವಾರ ತೆಲಂಗಾಣ ರಾಜ್ಯದಲ್ಲಿ ನೂತನ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಿದರು.

ತಂದೆಯ ಹೆಸರನ್ನು ಒಳಗೊಂಡ ವೈಎಸ್‌ಆರ್ ತೆಲಂಗಾಣ ಪಾರ್ಟಿ (ವೈಎಸ್‌ಆರ್‌ಟಿಪಿ) ಹೆಸರು ಮತ್ತು ಧ್ವಜದ ಸ್ವರೂಪವನ್ನು ಅವರು ಘೋಷಿಸಿದರು. ಗುರುವಾರ ಅವರ ತಂದೆ ದಿವಂಗತ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಜನ್ಮದಿನವೂ ಹೌದು.

ಕಳೆದ ಫೆಬ್ರುವರಿಯಲ್ಲಿಯೇ ಶರ್ಮಿಳಾ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆ ಆರಂಭಿಸಿದ್ದರು. ‘ಪಕ್ಷ ಆರಂಭಿಸಲು ಅಣ್ಣನ ಒಪ್ಪಿಗೆ ಇರಲಿಲ್ಲ. ಆದರೆ, ಶರ್ಮಿಳಾ ತೀರ್ಮಾನ ಕೈಗೊಳ್ಳಲು ಸ್ವತಂತ್ರರಿದ್ದಾರೆ’ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.