ADVERTISEMENT

31 ವರ್ಷಗಳ ನಂತರ ಬಾಗಿಲು ತೆರೆದ ಶೀತಲ್‌ ನಾಥ್‌ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 21:47 IST
Last Updated 17 ಫೆಬ್ರುವರಿ 2021, 21:47 IST

ಶ್ರೀನಗರ: ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಬಾಗಿಲು ಮುಚ್ಚಿದ್ದ, ಶೀತಲ್‌ ನಾಥ್‌ ದೇವಸ್ಥಾನವನ್ನು ವಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಮತ್ತೆ ತೆರೆಯಲಾಗಿದೆ.

ಇಲ್ಲಿಯ ಕ್ರಲ್‌ಖೂಡ್ ಪ್ರದೇಶದಲ್ಲಿರುವ ದೇವಸ್ಥಾನವನ್ನು ಭಯೋತ್ಪಾದನಾ ಚಟುವಟಿಕೆ ಹಿನ್ನೆಲೆಯಲ್ಲಿ 1990ರಲ್ಲಿ ಮುಚ್ಚಲಾಗಿತ್ತು. ಅಂದಿನಿಂದ ಈ ದೇವಸ್ಥಾನದಲ್ಲಿ ಯಾವುದೇ ಪೂಜೆಗಳು ನಡೆದಿಲ್ಲ. ಸುಮಾರು 31 ವರ್ಷಗಳ ನಂತರ ಮಂಗಳವಾರ ಮೊದಲ ಬಾರಿಗೆ ಮೂವತ್ತು ಕಾಶ್ಮೀರಿ ಪಂಡಿತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದವನ್ನುನೀಡಲಾಯಿತು.

ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀನಗರ ಮೇಯರ್‌ ಜುನೈದ್ ಅಜೀಂ, ‘ದೇವಸ್ಥಾನದ ಅಭಿವೃದ್ಧಿಯ ಜೊತೆಗೆ ಸುರಕ್ಷತೆಗೆ ಅಗತ್ಯವಾದ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

‘ದೇವಸ್ಥಾನದ ಬಾಗಿಲನ್ನು ಪುನಃ ತೆರೆದಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಮೂಲಕ ಕಾಶ್ಮೀರ ಸುರಕ್ಷಿತವಾಗಿದೆ ಎಂಬ ಸಂದೇಶ ರವಾನಿಸಲಾಗಿದೆ’ ಎಂದುಅರ್ಚಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.