ADVERTISEMENT

ಬುಡಕಟ್ಟು ಜನಾಂಗದವರ ಹೋರಾಟದ ಹಾದಿಗೆ ಸ್ಫೂರ್ತಿ ಶಿಬು ಸೊರೇನ್: ಅಮಿತ್‌ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2025, 10:18 IST
Last Updated 4 ಆಗಸ್ಟ್ 2025, 10:18 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ಶಿಬು ಸೊರೇನ್ ಅವರು ಜಾರ್ಖಂಡ್‌ ಬುಡಕಟ್ಟು ಜನಾಂಗದವರ ಹಕ್ಕುಗಳಿಗಾಗಿ ಹಾಗೂ ಸಬಲೀಕರಣಕ್ಕಾಗಿ ದಶಕಗಳ ಕಾಲ ದಿಟ್ಟವಾಗಿ ಹೋರಾಟ ನಡೆಸಿದ ನಾಯಕ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸ್ಥಾಪಕ, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಇಂದು (ಸೋಮವಾರ) ನಿಧನರಾದರು. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶಿಬು ಅವರಿಗೆ 81 ವರ್ಷ ವಯಸ್ಸಾಗಿತ್ತು.

ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಅಮಿತ್‌ ಶಾ, ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ADVERTISEMENT

‘ತಮ್ಮ ಸರಳ ವ್ಯಕ್ತಿತ್ವ ಮತ್ತು ವಿನಮ್ರ ಸ್ವಭಾವದಿಂದಲೇ ಅವರು ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದಿದ್ದರು' ಎಂದು ಅಮಿತ್‌ ಶಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬುಡಕಟ್ಟು ಜನಾಂಗದವರ ಏಳ್ಗೆಗಾಗಿ ಅವರ ಸಬಲೀಕರಣಕ್ಕಾಗಿ ದಶಕಗಳ ಕಾಲ ಹೋರಾಟದ ಹಾದಿಯಲ್ಲೇ ಸಾಗಿದ್ದ ಅವರು, ಜಾರ್ಖಂಡ್‌ ಪ್ರತ್ಯೇಕ ರಾಜ್ಯ ರಚನೆಗೆ ಶ್ರಮಿಸಿದ್ದರು. ಶಿಬು ನಾಲ್ಕು ದಶಕಗಳ ಕಾಲ ಸುಧೀರ್ಘ ರಾಜಕೀಯದಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.