ADVERTISEMENT

ನೌಕಾಪಡೆಯ ಮೊದಲ ಮಹಿಳಾ ಪೈಲಟ್‌ ಶಿವಾಂಗಿ

ಪಿಟಿಐ
Published 2 ಡಿಸೆಂಬರ್ 2019, 19:43 IST
Last Updated 2 ಡಿಸೆಂಬರ್ 2019, 19:43 IST
ಶಿವಾಂಗಿ
ಶಿವಾಂಗಿ   

ಕೊಚ್ಚಿ: ಸಬ್ ಲೆಫ್ಟಿನೆಂಟ್ ಶಿವಾಂಗಿ ಅವರು ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿ ಸೋಮವಾರ ನೇಮಕಗೊಂಡಿದ್ದಾರೆ.

ಬಿಹಾರದ ಮುಜಫ್ಫರ್‌ಪುರ ನಗರದವರಾದ ಶಿವಾಂಗಿ, ನೇವಲ್ ಡಾರ್ನಿಯರ್ ಕಣ್ಗಾವಲು ವಿಮಾನಕ್ಕೆ ಪೈಲಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಶಿವಾಂಗಿ ಅವರನ್ನು ಕಾರ್ಯಾಚರಣೆ ತರಬೇತಿ ಪೂರ್ಣಗೊಂಡ ಬಳಿಕ ಪೈಲಟ್ ಆಗಿ ನೇಮಕ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

‘ಪೈಲಟ್‌ ಆಗಬೇಕು ಎಂಬುವುದು ನನ್ನ ಕನಸಾಗಿತ್ತು. ಈಗ ಅದು ಈಡೇರಿದ್ದು, ಇದರಿಂದ ನನಗೆ ತುಂಬಾ ಹೆಮ್ಮೆಯ ಭಾವನೆ ಮೂಡಿದೆ’ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.