ADVERTISEMENT

ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆ: ಹಿಂದೂ ಬಣದ ಪರ ವಕೀಲ

ಐಎಎನ್ಎಸ್
Published 16 ಮೇ 2022, 9:25 IST
Last Updated 16 ಮೇ 2022, 9:25 IST
ಜ್ಞಾನವಾಪಿ ಮಸೀದಿ: ಪಿಟಿಐ ಚಿತ್ರ
ಜ್ಞಾನವಾಪಿ ಮಸೀದಿ: ಪಿಟಿಐ ಚಿತ್ರ   

ವಾರಾಣಸಿ: ಇಲ್ಲಿನ ಕಾಶಿ ವಿಶ್ವನಾಥ ಮಂದಿರದ ಬಳಿಯ ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಸೋಮವಾರ ಬೆಳಿಗ್ಗೆ ಮುಕ್ತಾಯಗೊಂಡಿದ್ದು, ಮಸೀದಿಯ ಒಳಗಿನ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಬಣದ ವಕೀಲರೊಬ್ಬರು ಹೇಳಿದ್ದಾರೆ.

ಶಿವಲಿಂಗದ ರಕ್ಷಣೆ ಕೋರಿ ಸಿವಿಲ್ ನ್ಯಾಯಾಲಯಕ್ಕೆ ಹೋಗುವುದಾಗಿ ವಕೀಲ ವಿಷ್ಣು ಜೈನ್ ಹೇಳಿದ್ದಾರೆ.

ನಂದಿ ಕಡೆ ಮುಖ ಮಾಡಿರುವ ಶಿವಲಿಂಗ ಇದಾಗಿದ್ದು, 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಎಂದು ಹಿಂದೂ ಬಣದ ಮತ್ತೊಬ್ಬ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ.

ADVERTISEMENT

ಭಾರೀ ಭದ್ರತೆ ನಡುವೆ ನಡೆದ ಸಮೀಕ್ಷೆಯ ವರದಿಯನ್ನು ಅಡ್ವೊಕೇಟ್ ಕಮೀಷನರ್ ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ಜ್ಞಾನವಾಪಿ ಸಂಕೀರ್ಣದ ಪಶ್ಚಿಮ ಗೋಡೆಯ ಮೇಲೆ ಹಿಂದೂ ದೇವಾಲಯದ ಅವಶೇಷಗಳು ಗೋಚರಿಸಿತ್ತು. ಇದಕ್ಕಾಗಿ ಸೋಮವಾರ ನಾಲ್ಕನೇ ಬೀಗ ತೆರೆಯಲಾಗಿತ್ತು. ಶನಿವಾರ ನಡೆದ ಸಮೀಕ್ಷೆ ವೇಳೆ ಮೊದಲ ಮೂರು ಕೊಠಡಿ ತೆರೆಯಲಾಗಿತ್ತು.

ನಿನ್ನೆ ಶೇಕಡ 65ರಷ್ಟು ಮುಗಿದಿದ್ದ ವಿಡಿಯೊ ಸಮೀಕ್ಷೆ ಇಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ 10.15ಕ್ಕೆ ಮುಕ್ತಾಯಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.