ADVERTISEMENT

ನನ್ನ ಸ್ಫೂರ್ತಿಯ ಮೂಲ ನೀನು: ಪತ್ನಿಯನ್ನು ಹಾಡಿಹೊಗಳಿದ ಶಿವರಾಜ್‌ ಸಿಂಗ್‌ ಚೌಹಾಣ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2020, 11:55 IST
Last Updated 11 ನವೆಂಬರ್ 2020, 11:55 IST
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಸಿಹಿ ಕೊಡುತ್ತಿರುವ ಪತ್ನಿ-ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಚಿತ್ರ
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಸಿಹಿ ಕೊಡುತ್ತಿರುವ ಪತ್ನಿ-ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಚಿತ್ರ   

ಭೋಪಾಲ್‌: ಮಧ್ಯಪ್ರದೇಶದ ವಿಧಾನಸಭೆಯ 28 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿಯು 19 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರವು ನಿರ್ಣಾಯಕ ಗೆಲುವು ದಾಖಲಿಸಿದೆ. ಈ ಅಭೂತಪೂರ್ಣ ಸಾಧನೆಯ ಹಿಂದೆ ತಮ್ಮ ಪತ್ನಿ ಇರುವುದಾಗಿ ಚೌಹಾಣ್‌ ಟ್ವೀಟ್‌ ಮಾಡಿದ್ದಾರೆ.

ಈ ವಿಚಾರವಾಗಿ ಬುಧವಾರ ಬೆಳಿಗ್ಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು ತಮ್ಮ ಪತ್ನಿಯನ್ನು 'ಶಕ್ತಿ ಮತ್ತು ಸ್ಫೂರ್ತಿ' ಎಂದು ಹಾಡಿಹೊಗಳಿದ್ದಾರೆ.

'ನನ್ನ ಬದುಕಿನ ಪ್ರತಿ ವಿಜಯಕ್ಕೂ ನಿನ್ನ ಬೆಂಬಲವಿದೆ. ನನ್ನ ಶಕ್ತಿ ಮತ್ತು ಸ್ಫೂರ್ತಿಯ ಮೂಲ ನೀನು. ನೀನು ನನ್ನೊಂದಿಗಿದ್ದರೆ, ಗೆಲುವು ಯಾವಾಗಲೂ ನನ್ನದಾಗಿರುತ್ತದೆ' ಎಂದು ಚೌಹಾಣ್ ಶ್ಲಾಘಿಸಿದ್ದಾರೆ.

ADVERTISEMENT

ಮಧ್ಯಪ್ರದೇಶದ ವಿಧಾನಸಭೆಯ 28 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, 19ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಮೂಲಕ ಸರ್ಕಾರವನ್ನು ಭದ್ರಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.