ADVERTISEMENT

ಸನಾತನ ಧರ್ಮದ ಅಪಮಾನ ಸಹಿಸಲ್ಲ: ಸುಪ್ರೀಂಕೋರ್ಟ್‌ನಲ್ಲೇ CJI ಅವರತ್ತ ಶೂ ಎಸೆದ ವಕೀಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2025, 8:00 IST
Last Updated 6 ಅಕ್ಟೋಬರ್ 2025, 8:00 IST
<div class="paragraphs"><p>ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ&nbsp;</p></div>

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ 

   

ಪಿಟಿಐ ಚಿತ್ರ

ನವದೆಹಲಿ: ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರತ್ತ ಸುಪ್ರೀಂ ಕೋರ್ಟ್‌ನಲ್ಲೇ ವಕೀಲ ಶೂ ಎಸೆದಿರುವ ಘಟನೆ ಸೋಮವಾರ ನಡೆದಿದೆ.

ADVERTISEMENT

ಸಿಜೆಐ ನೇತೃತ್ವದ ಪೀಠದ ಎದುರು ವಕೀಲರು ಪ್ರಕರಣಗಳ ಕುರಿತು ಪ್ರಸ್ತಾಪಿಸುತ್ತಿದ್ದಾಗ ಘಟನೆ ನಡೆದಿದೆ. ಆದಾಗ್ಯೂ, ಇದರಿಂದ ಕುಗ್ಗದ ನ್ಯಾ. ಗವಾಯಿ ಅವರು, ಪ್ರಸ್ತಾವನೆ ಮುಂದುವರಿಸುವಂತೆ ವಕೀಲರಿಗೆ ಹೇಳಿದ್ದಾರೆ.

'ಇದಕ್ಕೆಲ್ಲ ವಿಚಲಿತರಾಗದಿರಿ. ನಾನೂ ವಿಚಲಿತಗೊಳ್ಳುವುದಿಲ್ಲ. ಇಂತಹ ವಿಚಾರಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎನ್ನುವ ಮೂಲಕ ದಿಟ್ಟತನ ಪ್ರದರ್ಶಿಸಿದ್ದಾರೆ ಎಂದು 'ಬಾರ್‌ ಅಂಡ್ ಬೆಂಚ್' ವರದಿ ಮಾಡಿದೆ.

ದಾಳಿಗೆ ಯತ್ನಿಸಿದ ವಕೀಲ ನ್ಯಾಯಾಲಯದ ಆವರಣದಿಂದ ಹೊರನಡೆಯುವ ವೇಳೆ, 'ಸನಾತನ ಧರ್ಮದ ಅಪಮಾನ ಸಹಿಸುವುದಿಲ್ಲ' ಎಂದು ಕೂಗಿರುವುದಾಗಿಯೂ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.