ತಿರುವನಂತಪುರ: ದೇಶದಲ್ಲೇ ಅತೀ ಕುಬ್ಜ ಎಂದೇ ಪರಿಗಣಿಸಲಾಗಿರುವ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.
ಕೇರಳದ ತ್ರಿಶ್ಯೂರ್‌ನ ಅಯ್ಯಂಥೋಲ್‌ನ ಕೆ.ಕೆ. ಸಿಮಿ ಅವರು 95 ಸೆಂ.ಮೀ ಎತ್ತರ ಇದ್ದಾರೆ. ಸಿಮಿ ಅವರು ಜೂನ್ 23ರಂದು ತ್ರಿಶ್ಯೂರ್‌ನ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಲಿಮ್ಕಾ ದಾಖಲೆಗಳ ಪಟ್ಟಿಗೆ ಸಿಮಿ ಹೆಸರನ್ನು ಸೇರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಸ್ತುತ ಅವರು ಸಹಕಾರ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗುವಿಗೆ ಜನ್ಮ ನೀಡಿದ ದೇಶದ ಅತೀ ಕುಬ್ಜ ಮಹಿಳೆ ಎಂದು ಆಂಧ್ರಪ್ರದೇಶ ಪಿ.ಕಾಮಾಕ್ಷಿ ಎನ್ನುವವರನ್ನು ಇದುವರೆಗೆ ಪರಿಗಣಿಸಲಾಗಿತ್ತು. ಅವರು 108 ಸೆಂ.ಮೀ ಎತ್ತರವಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.