ADVERTISEMENT

ಶ್ರದ್ಧಾ ವಾಲ್ಕರ್‌ ಹತ್ಯೆ ಪ್ರಕರಣ: ಇಲ್ಲಿವರೆಗೂ ಪತ್ತೆಯಾಗದ ಪ್ರಮುಖ ಸಾಕ್ಷ್ಯ

ಆರೋಪಿ ಅಫ್ತಾಬ್‌ ಇಂದು ನ್ಯಾಯಾಲಯಕ್ಕೆ ಹಾಜರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2022, 11:31 IST
Last Updated 26 ನವೆಂಬರ್ 2022, 11:31 IST
   

ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾನನ್ನು ಇಂದು ಪೊಲೀಸರು ಮೆಹ್ರೌಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಕೊಲೆಗೆ ಪ್ರಮುಖ ಸಾಕ್ಷ್ಯಗಳಾದ ‌ಹತ್ಯೆಗೆ ಸಂಬಂಧಿತ ಆಯುಧ , ಶ್ರದ್ಧಾ ಮೊಬೈಲ್‌ ಮತ್ತು ಕೊಲೆಯಾದ ದಿನ ಧರಿಸಿದ್ದ ಬಟ್ಟೆ ವಶಕ್ಕೆ ಪಡೆಯದಿರುವ ಕುರಿತು ನ್ಯಾಯಾಲಯದಲ್ಲಿ ಪೊಲೀಸರು ಪ್ರಶ್ನೆ ಎದುರಿಸುವ ಸಾಧ್ಯತೆಯಿದೆ. ಪ್ರಮುಖ್ಯ ಸಾಕ್ಷ್ಯಗಳೇ ಲಭ್ಯವಾಗದಿರುವುದು ಪೊಲೀಸರಿಗೆ ವಿಚಾರಣೆಯಲ್ಲಿ ತೀವ್ರ ಹಿನ್ನಡೆ ಉಂಟು ಮಾಡಿದೆ. ಪ್ರಕರಣದ ಸ್ವರೂಪ ದಿನದಿಂದ ದಿನಕ್ಕೆ ಬದಲಾಗುತ್ತಿದೆ.

ಅಫ್ತಾಬ್‌ ಅಮೀನ್‌, ಲಿವ್‌ ಇನ್‌ ಸಂಬಂಧದಲ್ಲಿದ್ದ ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್‌ ಕೊಲೆಗೈದು ದೇಹವನ್ನು ಕತ್ತರಿಸಿ 35 ತುಂಡುಗಳಾಗಿಸಿದ್ದ. ದೇಹದ ಭಾಗಗಳನ್ನು ಮೆಹ್ರೌಲಿ ಅರಣ್ಯದ ವಿವಿಧೆಡೆ ಹೂತು ಹಾಕಿದ್ದ. ಶ್ವಾನ ದಳದೊಂದಿಗೆ ಪೊಲೀಸರು ದೇಹದ ಭಾಗಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಶ್ರದ್ಧಾ ರುಂಡಇಲ್ಲಿಯವರೆಗೂಪತ್ತೆಯಾಗಿಲ್ಲ.ಈಗಾಗಲೇ ಪತ್ತೆಯಾಗಿರುವ ದೇಹದ ಭಾಗಗಳು ಶ್ರದ್ಧಾ ತಂದೆಯ ಡಿಎನ್‌ಎಯೊಂದಿಗೆ ತಾಳೆಯಾಗಬೇಕಿದೆ.

ADVERTISEMENT

ಅಫ್ತಾಬ್‌ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆತ ತನ್ನ ಹೇಳಿಕೆಯನ್ನು ಪದೇ ಪದೇ ಬದಲಿಸುತ್ತಿದ್ದಾನೆ. ಮೊದಲು ಮಹಾರಾಷ್ಟ್ರದಲ್ಲಿ ಫೋನ್‌ ಎಸೆದಿರುವುದಾಗಿ ಹೇಳಿದ್ದಾನೆ. ಆದರೆ ಈಗ ದೆಹಲಿಯಲ್ಲೇ ಎಲ್ಲೋ ಬಿಸಾಡಿರುವುದಾಗಿ ಹೇಳುತ್ತಿದ್ದಾನೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.