ADVERTISEMENT

ಸಿಧುಗೆ ಷೋಕಾಸ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 12 ಮೇ 2019, 6:20 IST
Last Updated 12 ಮೇ 2019, 6:20 IST
ಸಿಧು
ಸಿಧು   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಿರಸ್ಕಾರ ಭಾವನೆಯ ಹೇಳಿಕೆ ನೀಡಿದ್ದು, ಮೇಲ್ನೋಟಕ್ಕೆ ನೀತಿಸಂಹಿತೆ ಉಲ್ಲಂಘನೆ ಎಂದುಕಂಡುಬಂದ ಹಿನ್ನೆಲೆಯಲ್ಲಿ ಚುನಾವನಾ ಆಯೋಗ ಕಾಂಗ್ರೆಸ್ ಮುಖಂಡ ನವಜೋತ್‌ಸಿಂಗ್ ಸಿಧು ಅವರಿಗೆ ಷೋಕಾಸ್ ನೋಟಿಸ್‌ ಜಾರಿ ಮಾಡಿದೆ.

ಮಧ್ಯಪ್ರದೇಶದಲ್ಲಿ ಏಪ್ರಿಲ್‌ 29ರಂದು ಮಾಡಿದ ಭಾಷಣದಲ್ಲಿ ಸಿಧು ಅವರು, ‘ರಫೇಲ್‌ ಜೆಟ್‌ ಖರೀದಿ ವಹಿವಾಟಿನಲ್ಲಿ ಮೋದಿ ಅವರು ಹಣ ಮಾಡುತ್ತಿದ್ದಾರೆ, ಬ್ಯಾಂಕ್‌ ಲೂಟಿ ಮಾಡಿ ಪರಾರಿಯಾಗಲು ಸಿರಿವಂತರಿಗೆ ಅವರು ನೆರವು ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಇದನ್ನು ವಿರೋಧಿಸಿ ಬಿಜೆಪಿಯವರು ಸಿಧು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಸಿಧು ಮತ್ತೆ ಟೀಕೆ: ಆಯೋಗದ ನೋಟಿಸ್ ನಂತರವೂ ಪ್ರಧಾನಿ ವಿರುದ್ಧ ಟೀಕೆ ಮುಂದುವರಿಸಿರುವ ನವಜ್ಯೋತ್ ಸಿಂಗ್‌ ಸಿಧು, ಪ್ರಧಾನಿ ಅವರನ್ನು ‘ಕಡಿಮೆ ಕೆಲಸ ಮಾಡಿಯೂ ಹೆಚ್ಚು ಮಾಡಿದಂತೆ ಬಿಂಬಿಸಿಕೊಳ್ಳುವ ನವವಧುವಿನಂತೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.