ADVERTISEMENT

ಸಿಕ್ಕಿಂ: ಬಿಜೆಪಿ ಏಕಾಂಗಿ ಸ್ಪರ್ಧೆ

ಪಿಟಿಐ
Published 23 ಮಾರ್ಚ್ 2024, 19:32 IST
Last Updated 23 ಮಾರ್ಚ್ 2024, 19:32 IST
   

ಗ್ಯಾಂಗ್ಟಕ್: ಸಿಕ್ಕಿಂನ ಆಡಳಿತಾರೂಢ ‘ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ’ (ಎಸ್‌ಕೆಎಂ) ಜತೆಗಿನ ತನ್ನ
ಮೈತ್ರಿ ಅಂತ್ಯಗೊಂಡಿದೆ ಎಂದು ಘೋಷಿಸಿರುವ ಬಿಜೆಪಿ, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ತಿಳಿಸಿದೆ.

ಎಸ್‌ಕೆಎಂ ಜತೆ ಸೀಟು ಹಂಚಿಕೆ ಬಗ್ಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ರಾಜ್ಯಕ್ಕೆ ಹಿಂದಿರುಗಿದ ಬಳಿಕ ಬಿಜೆಪಿ ಸಿಕ್ಕಿಂ ರಾಜ್ಯ ಘಟಕದ ಅಧ್ಯಕ್ಷ ಡಿ.ಆರ್.ಥಾಪಾ ಮೈತ್ರಿ ಅಂತ್ಯವಾಗಿರುವುದನ್ನು ಘೋಷಿಸಿದರು.

ರಂಗ್ಪೋನಲ್ಲಿ ಮಾತನಾಡಿದ ಥಾಪಾ, ‘ಮೈತ್ರಿಯ ವಿಸರ್ಜನೆಯು ರಾಜ್ಯದ ಜನರ ಸೇವೆ ಮಾಡುವ ಅತ್ಯುನ್ನತ ಅವಕಾಶವನ್ನು ಪಕ್ಷಕ್ಕೆ ಒದಗಿಸಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.