ADVERTISEMENT

ಅಪಘಾತ: ಸ್ವಗ್ರಾಮಗಳಿಗೆ ಸೈನಿಕರ ಮೃತದೇಹ ರವಾನೆ

ಪಿಟಿಐ
Published 24 ಡಿಸೆಂಬರ್ 2022, 14:32 IST
Last Updated 24 ಡಿಸೆಂಬರ್ 2022, 14:32 IST
ಝೆಮಾ ರಸ್ತೆ ಅಪಘಾತದಲ್ಲಿ ಮೃತಪಟ್ಟ 16 ಮಂದಿ ಸೈನಿಕರಿಗೆ ವಾಯುಪಡೆಯ ಅಧಿಕಾರಿಗಳು ಶನಿವಾರ ಪುಷ್ಪ ನಮನ ಸಲ್ಲಿಸಿದರು –ಪಿಟಿಐ ಚಿತ್ರ
ಝೆಮಾ ರಸ್ತೆ ಅಪಘಾತದಲ್ಲಿ ಮೃತಪಟ್ಟ 16 ಮಂದಿ ಸೈನಿಕರಿಗೆ ವಾಯುಪಡೆಯ ಅಧಿಕಾರಿಗಳು ಶನಿವಾರ ಪುಷ್ಪ ನಮನ ಸಲ್ಲಿಸಿದರು –ಪಿಟಿಐ ಚಿತ್ರ   

ಬಾಗ್‌ಡೋಗರಾ/ ಗ್ಯಾಂಗ್ಟಕ್‌ (ಪಿಟಿಐ): ಸಿಕ್ಕಿಂನ ಝೆಮಾ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 16 ಮಂದಿ ಸೈನಿಕರ ಮೃತದೇಹಗಳಿಗೆ ಪಶ್ಚಿಮ ಬಂಗಾಳದ ಬಾಗ್‌ಡೊಗರ ವಿಮಾನ ನಿಲ್ದಾಣದಲ್ಲಿ ಶನಿವಾರ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

‘ವಾಯುಪಡೆಯವಿಶೇಷ ವಿಮಾನಗಳಲ್ಲಿ 15 ಸೈನಿಕರ ಮೃತದೇಹಗಳನ್ನು ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಬಿಹಾರದ ಒಬ್ಬ ಸೈನಿಕನ ಮೃತದೇಹವನ್ನು ರಸ್ತೆ ಮಾರ್ಗದ ಮೂಲಕವಾಗಿ ಕಳುಹಿಸಿಕೊಡಲಾಯಿತು’ ಎಂದು ಸೇನೆ ತಿಳಿಸಿದೆ.

16 ಮಂದಿ ಸೈನಿಕರ ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಸಿಕ್ಕಿಂನ ಗ್ಯಾಂಗ್ಟಕ್‌ಗೆ ಸೇನಾ ವಾಹನಗಳಲ್ಲಿ ಮೃತದೇಹಗಳನ್ನು ತರಲಾಗಿತ್ತು. ಈ ವೇಳೆ ಸಿಕ್ಕಿಂನ ರಾಜ್ಯಪಾಲ ಗಂಗಾ ಪ್ರಸಾದ್‌, ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌, ತ್ರಿಶಕ್ತಿ ವಿಭಾಗದ ಜನರಲ್‌ ಕಮಾಂಡರಿಂಗ್‌ ಅಧಿಕಾರಿ ಲೆಫ್ಟಿನೆಂಟ್‌ ಜನರಲ್‌ ವಿಪಿಎಸ್‌ ಕೌಶಿಕ್‌, ಸೇನಾ ಹಾಗೂ ವಾಯು ಪಡೆಯು ಅಧಿಕಾರಿಗಳು ಸೈನಿಕರಿಗೆ ನಮನ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.