ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ಸಂಬಂಧ ಹಲವು ಮಹತ್ವದ ಅಂಶಗಳ ಬಗ್ಗೆಭಾರತ ಮತ್ತು ಪಾಕಿಸ್ತಾನ ಇದೇ 29ರಂದು ಮಾತುಕತೆಯನ್ನುಪುನರಾರಂಭಿಸಲಿವೆ.
ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರು ಅಧಿಕಾರ ಸ್ವೀಕರಿಸಿದ ನಂತರ, ಉಭಯ ದೇಶಗಳ ನಡುವೆ ನಡೆಯಲಿರುವ ಮೊದಲ ದ್ವಿಪಕ್ಷೀಯ ಮಾತುಕತೆ ಇದಾಗಲಿದೆ.
ಭಾರತದ ಪರವಾಗಿ ಸಿಂಧೂ ನದಿ ಆಯೋಗದ ಆಯುಕ್ತ ಪಿ.ಕೆ.ಸಕ್ಸೇನಾ ಅವರು ಪಾಕಿಸ್ತಾನದ ಆಯುಕ್ತ ಸೈಯದ್ ಮೆಹರ್ ಅಲಿ ಅವರೊಂದಿಗೆ ಎರಡು ದಿನ ಮಾತುಕತೆ ನಡೆಸಲಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.