ADVERTISEMENT

ಗಾಯಕಿ ಕಲ್ಪನಾ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 15:25 IST
Last Updated 5 ಮಾರ್ಚ್ 2025, 15:25 IST
<div class="paragraphs"><p>ಕಲ್ಪನಾ</p></div>

ಕಲ್ಪನಾ

   

ಹೈದರಾಬಾದ್‌: ತಮಿಳು, ತೆಲುಗು ಮತ್ತು ಬಹು ಭಾಷೆಗಳಲ್ಲಿ ಖ್ಯಾತಿ ಪಡೆದ ಹಿನ್ನೆಲೆ ಗಾಯಕಿ ಕಲ್ಪನಾ ಅವರು ಮಂಗಳವಾರ ಸಂಜೆ ಹೈದರಾಬಾದ್‌ನ ನಿಜಾಮ್‌ಪೇಟೆಯಲ್ಲಿರುವ ನಿವಾಸದಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಲ್ಪನಾ ತನಗೆ ಪ್ರಜ್ಞೆ ತಪ್ಪುತ್ತಿದೆ ಎಂದು ಪತಿಗೆ ತಿಳಿಸಿದ್ದರೆ, ಬಳಿಕ ಅವರನ್ನು ಸಂಪರ್ಕಿಸಲು ಯತ್ನಿಸಿದರು ಅದು ಸಾಧ್ಯವಾಗದಿದ್ದಾಗ ಕಲ್ಪನಾ ಪತಿ, ತಕ್ಷಣವೇ ನಿವಾಸಿ ಸಂಘದ ಪ್ರತಿನಿಧಿಯನ್ನು ಸಂಪರ್ಕಿಸಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಬಳಿಕ ಪೊಲೀಸರು ಬಾಗಿಲು ಒಡೆದು ನೋಡಿದಾಗ, ಕಲ್ಪನಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಬುಧವಾರದ ಹೊತ್ತಿಗೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಲ್ಪನಾ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.