ADVERTISEMENT

SIR: ಗಣತಿ ನಮೂನೆಗಳ ಪೂರ್ಣ ಡಿಜಿಟಲೀಕರಣ; ಮೊದಲ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ

ಪಿಟಿಐ
Published 28 ನವೆಂಬರ್ 2025, 16:03 IST
Last Updated 28 ನವೆಂಬರ್ 2025, 16:03 IST
<div class="paragraphs"><p>ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ</p></div>

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ

   

ಕೃಪೆ: X/@ECISVEEP

ಕವರಟ್ಟಿ: ಲಕ್ಷದ್ವೀಪವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದ ಗಣತಿ ನಮೂನೆಗಳ ಶೇ 100ರಷ್ಟು ಡಿಜಿಟಲೀಕರಣ ಪೂರೈಸಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಎನಿಸಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.

ADVERTISEMENT

ಆಯೋಗವು ಅಕ್ಟೋಬರ್‌ 27ರಂದು ಮಾಡಿದ್ದ ಆದೇಶದಂತೆ, ಲಕ್ಷದ್ವೀಪದಲ್ಲಿ ಎಸ್ಐಆರ್‌ ಪ್ರಕ್ರಿಯೆಯು ಇದೇ ತಿಂಗಳು (ನವೆಂಬರ್‌) 4ರಂದು ಆರಂಭವಾಗಿತ್ತು.

 ಲಕ್ಷದ್ವೀಪ ದ್ವೀಪ ಸಮೂಹದಲ್ಲಿ ಜನವಸತಿ ಇರುವ ಹತ್ತು ದ್ವೀಪಗಳಲ್ಲಿ ಮನೆ ಮನೆಗಳಿಗೆ ತೆರಳಿ ನಮೂನೆಗಳನ್ನು ವಿತರಿಸಿದ್ದ 55 ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ), ಅವುಗಳನ್ನು ಭರ್ತಿ ಮಾಡಲೂ ನೆರವಾಗಿದ್ದರು. ಅವರಿಗೆ, ವಿವಿಧ ಪಕ್ಷಗಳಿಗೆ ಸೇರಿದ 133 ಮಂದಿ ಬೂತ್‌ ಮಟ್ಟದ ಏಜೆಂಟ್‌ಗಳು ಸಹಕಾರ ನೀಡಿದ್ದರು.

ಭರ್ತಿ ಮಾಡಲಾದ ಅರ್ಜಿಗಳ ಸಂಗ್ರಹ ಮತ್ತು ಅವುಗಳ ಡಿಜಿಟಲೀಕರಣಕ್ಕೆ ವೇಗ ನೀಡಲು ಪ್ರತಿ ದ್ವೀಪದ ನಿರ್ದಿಷ್ಟ ಸ್ಥಳಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿತ್ತು ಎಂದು ಚುನಾವಣಾ ನೋಂದಣಾಧಿಕಾರಿ ಮತ್ತು ನೋಡಲ್‌ ಅಧಿಕಾರಿ ಶಿವಂ ಚಂದ್ರ (ಐಎಎಸ್‌) ಹೇಳಿಕೆ ನೀಡಿದ್ದಾರೆ. 

ಕೇಂದ್ರಾಡಳಿತ ಪ್ರದೇಶವು ಸಂಪೂರ್ಣ ಗಣತಿ ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ನವೆಂಬರ್‌ 28ರಂದು ಪೂರೈಸಿದೆ. ಮತದಾರರ ಕರಡು ಪಟ್ಟಿಯನ್ನು (2025ರ) ಡಿಸೆಂಬರ್‌ 9ರಂದು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.