ADVERTISEMENT

ಭಾರತ್ ಪೆಟ್ರೋಲಿಯಂ, ಏರ್ ಇಂಡಿಯಾ ಮಾರ್ಚ್ ಒಳಗೆ ಮಾರಾಟವಾಗುವ ನಿರೀಕ್ಷೆ: ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 9:51 IST
Last Updated 17 ನವೆಂಬರ್ 2019, 9:51 IST
   

ನವದೆಹಲಿ:ಸಾಲದ ಸುಳಿಯಲ್ಲಿ ಸಿಲುಕಿರುವಏರ್‌ ಇಂಡಿಯಾ, ಭಾರತ್ಪೆಟ್ರೋಲಿಯಂಕಾರ್ಪೊರೇಷನ್ ಸಂಸ್ಥೆಗಳುಮುಂದಿನ ಮಾರ್ಚ್‌ಮಾರಾಟವಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ಹೇಳಿದ್ದಾರೆ.

ಟೈಮ್ಸ್ಅಫ್ಇಂಡಿಯಾ ಪತ್ರಿಕೆಗೆ ನೀಡಿರುವಸಂದರ್ಶನದಲ್ಲಿ ಈ ಹೇಳಿಕೆ ನೀಡಿರುವ ಅವರು, ಈಗಾಗಲೇ ಈ ಎರಡೂ ಸಂಸ್ಥೆಗಳು ಭಾರಿ ನಷ್ಟ ಅನುಭವಿಸುತ್ತಿದ್ದು, ಸಾಲದ ಹೊರೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಏರ್ ಇಂಡಿಯಾವಿಮಾನ ಯಾನಸಂಸ್ಥೆಯಲ್ಲಿ ಮಾರಾಟಕ್ಕೆ ಇದ್ದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ. ಇದೇ ವರ್ಷದಲ್ಲಿ ಕರೆಯಲಾಗಿದ್ದ ಬಿಡ್ನಲ್ಲಿ ಸಂಸ್ಥೆಯನ್ನುಖರೀದಿಸಲುಹಲವು ಹೂಡಿಕೆದಾರರುಮುಂದೆ ಬಂದಿರುವುದಾಗಿ ಅವರು ಹೇಳಿದ್ದಾರೆ.

ADVERTISEMENT

ಈಏರಡುಸರ್ಕಾರಿ ಸಂಸ್ಥೆಗಳ ಮೇಲೆ ₹58000 ಕೋಟಿ ಸಾಲದ ಹೋರೆ ಇದೆ ಈ ಹಿನ್ನೆಲೆಯಲ್ಲಿಸಚಿವರ ಹೇಳಿಕೆ ಮಹತ್ವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.