ADVERTISEMENT

ದೇಶದ್ರೋಹ ಕಾನೂನು ಉಳಿಸಿಕೊಳ್ಳಬೇಕು: ಹೈಕೋರ್ಟ್‌ ಮಾಜಿ ಸಿಜೆ ಅವಸ್ಥಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 16:05 IST
Last Updated 27 ಜೂನ್ 2023, 16:05 IST
 ಋತು ರಾಜ್‌ ಅವಸ್ಥಿ
 ಋತು ರಾಜ್‌ ಅವಸ್ಥಿ   

ನವದೆಹಲಿ: ವಸಹಾತುಶಾಹಿ ಕಾಲದ ‘ದೇಶದ್ರೋಹ’ ಕಾನೂನು ರದ್ದತಿಗೆ ಆಗ್ರಹ ಕೇಳಿಬರುತ್ತಿರುವ ನಡುವೆಯೇ, ‘ಭಾರತದ ಸುರಕ್ಷತೆ ಮತ್ತು ಸಮಗ್ರತೆಗೆ ಈ ಕಾನೂನು ಮುಖ್ಯ’ ಎಂದು ಕಾನೂನು ಆರೋಗದ ಮುಖ್ಯಸ್ಥ ನ್ಯಾಯಮೂರ್ತಿ ಋತು ರಾಜ್‌ ಅವಸ್ಥಿ ಮಂಗಳವಾರ ಹೇಳಿದ್ದಾರೆ.

ಕಳೆದ ವರ್ಷ ಮೇ ನಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನದಂತೆ ಸದ್ಯ ಕಾನೂನನ್ನು ತಡೆಹಿಡಿಯಲಾಗಿದೆ. ಈ ಮಧ್ಯೆ ಕಾನೂನನ್ನು ಉಳಿಸಿಕೊಳ್ಳುವ ಸಮಿತಿಯ ಶಿಫಾರಸನ್ನು ಅವಸ್ಥಿ ಸಮರ್ಥಿಸಿಕೊಂಡಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ‘ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಗಳು ಪ್ರತ್ಯೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತವೆ. ಇವು ದೇಶದ್ರೋಹಕ್ಕೆ ಸಂಬಂಧಿಸಿದ ಅಪರಾಧಗಳೆಡೆಗೆ ಗಮನ ನೀಡುವುದಿಲ್ಲ. ಹೀಗಾಗಿ ದೇಶದ್ರೋಹಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾನೂನಿನ ಅಗತ್ಯವಿದೆ’ ಎಂದು ಹೇಳಿದ್ದಾರೆ. 

ADVERTISEMENT

‘ಕಾಶ್ಮೀರದಿಂದ ಕೇರಳದ ವರೆಗೆ ಮತ್ತು ಪಂಜಾಬ್‌ನಿಂದ ಈಶಾನ್ಯದವರೆಗೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಏಕತೆ ಮತ್ತು ಸಾರ್ವಭೌಮತೆ ಕಾಯ್ದುಕೊಳ್ಳಲು ಈ ಕಾನೂನು ಅಗತ್ಯವಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.