ADVERTISEMENT

ಪೆನ್ಸಿಲ್, ಮ್ಯಾಗಿ ದುಬಾರಿಯಾಗಿದೆ: ಬೆಲೆ ಏರಿಕೆ ಬಗ್ಗೆ ಮೋದಿಗೆ 6ರ ಬಾಲೆ ಪತ್ರ

ಐಎಎನ್ಎಸ್
Published 1 ಆಗಸ್ಟ್ 2022, 7:16 IST
Last Updated 1 ಆಗಸ್ಟ್ 2022, 7:16 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಲಖನೌ: ಬೆಲೆ ಏರಿಕೆಯಿಂದ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಉತ್ತರ ಪ್ರದೇಶದ ಆರು ವರ್ಷ ವಯಸ್ಸಿನ ಒಂದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬರ್‌ಮವು ಪಟ್ಟಣದ ಕೃತಿ ದುಬೆ ಪ್ರಧಾನಿಗೆ ಹಿಂದಿಯಲ್ಲಿ ಬರೆದಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

‘ನನ್ನ ಹೆಸರು ಕೃತಿ ದುಬೆ. ಒಂದನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿ ಜೀ, ನೀವು ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ನನ್ನ ಪೆನ್ಸಿಲ್, ರಬ್ಬರ್ ಕೂಡ ತುಟ್ಟಿಯಾಗಿವೆ. ಮ್ಯಾಗಿ ದರವೂ ಹೆಚ್ಚಾಗಿದೆ. ನಾನೇನು ಮಾಡಲಿ? ಇತರ ಮಕ್ಕಳು ನನ್ನ ಪೆನ್ಸಿಲ್ ಕದಿಯುತ್ತಿದ್ದಾರೆ’ ಎಂದು ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

ಬಾಲಕಿಯ ತಂದೆ ವಿಶಾಲ್ ದುಬೆ ವಕೀಲರಾಗಿದ್ದಾರೆ. ಇತ್ತೀಚೆಗೆ ಮಗಳು ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಿದ್ದಕ್ಕೆ ಆಕೆಯನ್ನು ತಾಯಿ ಗದರಿದ್ದರು. ಹೀಗಾಗಿ ಅವಳು ತನ್ನ ಮನದ ಮಾತನ್ನು ಹೇಳಿಕೊಂಡಿದ್ದಾಳೆ ಎಂದು ವಿಶಾಲ್ ದುಬೆ ಪ್ರತಿಕ್ರಿಯಿಸಿದ್ದಾರೆ.

ಕೃತಿ ದುಬೆ ಪ್ರಧಾನಿಗೆ ಬರೆದಿದ್ದಾಳೆ ಎನ್ನಲಾದ ಪತ್ರ (ಟ್ವಿಟರ್‌ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.