ADVERTISEMENT

ಎಂಎಸ್‌ಪಿ ಸಮಿತಿ ಸಭೆಗೆ ಹಾಜರಾಗಲ್ಲ: ಸಂಯುಕ್ತ ಕಿಸಾನ್ ಮೋರ್ಚಾ

ಪಿಟಿಐ
Published 16 ಆಗಸ್ಟ್ 2022, 14:20 IST
Last Updated 16 ಆಗಸ್ಟ್ 2022, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತ ಸಮಿತಿ ಮುಂದಿನವಾರ ಕರೆದಿರುವ ಸಭೆಗೆ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಈಗಾಗಲೇ ‘ರೈತ ವಿರೋಧಿ ಸಮಿತಿ’ಯನ್ನು ತಿರಸ್ಕರಿಸಿದ್ದೇವೆ. ಆಗಸ್ಟ್‌ 22ರಂದು ಸಮಿತಿ ಕರೆದಿರುವ ಸಭೆಗೆ ಹಾಜರಾಗುವುದಿಲ್ಲ’ ಎಂದು ತಿಳಿಸಿದ್ದಾರೆ.

ಭವಿಷ್ಯದ ಕಾರ್ಯತಂತ್ರಗಳ ಕುರಿತ ಚರ್ಚೆಗೆ ಎಂಎಸ್‌ಪಿ ಕುರಿತ ಸಮಿತಿಯು ಆಗಸ್ಟ್‌ 22ರಂದು ತನ್ನ ಮೊದಲ ಸಭೆ ನಿಗದಿ ಮಾಡಿದೆ. ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ (ಎನ್‌ಎಎಸ್‌ಸಿ) ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.