ಹೈದರಾಬಾದ್: ಸಣ್ಣ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಅಬು ಧಾಬಿಯ ಎಡ್ಜ್ ಕರಾಕಲ್ ಸಂಸ್ಥೆಯು, ಹೈದರಾಬಾದ್‌ನ ಎಂಇಐಎಲ್ ಸಮೂಹದ ಐಕಾಂ ಟೆಲಿ ಲಿಮಿಟೆಡ್ ಸಹಯೋದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಗಾಗಿ (ಸಿಆರ್‌ಪಿಎಫ್) ಇಲ್ಲಿನ ಘಟಕದಲ್ಲಿ ಸ್ನೈಪರ್ ರೈಫಲ್‌ಗಳನ್ನು ತಯಾರಿಸಲಿದೆ.
ಭಾರತ–ಯುಎಇ ರಕ್ಷಣಾ ಪಾಲುದಾರಿಕೆಯ ಹೆಗ್ಗುರುತಾಗಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಗರಿಷ್ಠ ಕಾರ್ಯಕ್ಷಮತೆಯ ‘200 ಸಿಎಸ್‌ಆರ್ ಸ್ನೈಪರ್ ರೈಫಲ್’ಗಳನ್ನು ಈ ಸಂಸ್ಥೆಗಳು ತಯಾರಿಸಲಿವೆ. ಭಾರತೀಯ ಶಸಸ್ತ್ರ ಪಡೆ, ಕೇಂದ್ರ ಶಸಸ್ತ್ರ ಪೊಲೀಸ್ ಪಡೆಯ ಶಸ್ತ್ರಾಸ್ತ್ರ ಅಗತ್ಯವನ್ನೂ ಈ ಘಟಕದ ಪೂರೈಸಲಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಭಾರತಕ್ಕೆ ಸಣ್ಣ ಶಸ್ತ್ರಾಸ್ತ್ರಗಳ ತಂತ್ರಜ್ಞಾನ ವರ್ಗಾಯಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ ಮೈಲಿಗಲ್ಲು’ ಎಂದು ಕರಾಕಲ್‌ನ ಸಿಇಒ ಅಹಮದ್ ಅಲಮೇರಿ ಹೇಳಿದ್ದಾರೆ.
2025ರ ನಾಲ್ಕನೆಯ ತ್ರೈಮಾಸಿಕದಲ್ಲಿ ಸಿಆರ್‌ಪಿಎಫ್‌ಗೆ ‘200 ಸಿಎಸ್‌ಆರ್ ಸ್ನೈಪರ್ ರೈಫಲ್’ಗಳ ವಿತರಣೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.