ADVERTISEMENT

ಇದೇ ಮೊದಲ ಬಾರಿಗೆ ಆರ್‌ಪಿಎಫ್‌ಗೆ ಮಹಿಳಾ ಮಹಾನಿರ್ದೇಶಕರ ನೇಮಕ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 16:26 IST
Last Updated 12 ಜುಲೈ 2025, 16:26 IST
<div class="paragraphs"><p>ಐಪಿಎಸ್‌ ಅಧಿಕಾರಿ ಧರಿಸುವ ಕ್ಯಾಪ್‌</p></div>

ಐಪಿಎಸ್‌ ಅಧಿಕಾರಿ ಧರಿಸುವ ಕ್ಯಾಪ್‌

   

ನವದೆಹಲಿ: ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್‌) ಮಹಾನಿರ್ದೇಶಕರನ್ನಾಗಿ ಹಿರಿಯ ‍ಐಪಿಎಸ್‌ ಅಧಿಕಾರಿ ಸೋನಾಲಿ ಮಿಶ್ರಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸೋನಾಲಿ ಅವರು ಈ ಹುದ್ದೆಗೆ ಏರುತ್ತಿರುವ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿಯಾಗಿದ್ದಾರೆ.

ಸದ್ಯ ಸೋನಾಲಿ ಅವರು ಮಧ್ಯಪ್ರದೇಶ ಪೊಲೀಸ್‌ನಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ (ಆಯ್ಕೆ) ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಧ್ಯಪ್ರದೇಶ ಕೇಡರ್‌ನ 1993ರ ಬ್ಯಾಚ್‌ನವರಾಗಿದ್ದಾರೆ.

ADVERTISEMENT

ತಮ್ಮ ನಿವೃತ್ತಿಯವರೆಗೆ (ಅಕ್ಟೋಬರ್‌ 31, 2026) ಇವರು ರೈಲ್ವೆ ಭದ್ರತಾ ಪಡೆಯ ಮಹಾನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಈ ಹುದ್ದೆಯಲ್ಲಿ ಸದ್ಯ ಮನೋಜ್‌ ಯಾದವ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಇದೇ ಜುಲೈ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.