ADVERTISEMENT

ಕೇರಳಕ್ಕೆ ಸೊನಾಲಿಕಾ ಟ್ರ್ಯಾಕ್ಟರ್ಸ್‌ ಕಂಪನಿಯಿಂದ ₹1 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 12:29 IST
Last Updated 30 ಆಗಸ್ಟ್ 2018, 12:29 IST
ಮುದಿತ್‌ ಗುಪ್ತ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ದೇಣಿಗೆಯ ಚೆಕ್‌ ಮತ್ತು ಟ್ರ್ಯಾಕ್ಟರ್‌ ಮಾದರಿ ಹಸ್ತಾಂತರಿಸಿದರು
ಮುದಿತ್‌ ಗುಪ್ತ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ದೇಣಿಗೆಯ ಚೆಕ್‌ ಮತ್ತು ಟ್ರ್ಯಾಕ್ಟರ್‌ ಮಾದರಿ ಹಸ್ತಾಂತರಿಸಿದರು   

ನವದೆಹಲಿ: ಸೊನಾಲಿಕಾ ಟ್ರ್ಯಾಕ್ಟರ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಕಂಪನಿಯು ಕೇರಳ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ ಮತ್ತು ಬಹುಪಯೋಗಿಯ 5 ಅತ್ಯಾಧುನಿಕ ಟ್ರ್ಯಾಕ್ಟರ್‌ಗಳನ್ನು ಕೊಡುಗೆ ನೀಡಿದೆ.

ಸೊನಾಲಿಕಾ ಸಮೂಹದ ಅಧ್ಯಕ್ಷ ಮುದಿತ್‌ ಗುಪ್ತ ಅವರು ದೇಣಿಗೆಯ ಚೆಕ್‌ ಮತ್ತು ಟ್ರ್ಯಾಕ್ಟರ್‌ಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಹಸ್ತಾಂತರಿಸಿದರು.

ಸೊನಾಲಿಕಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್‌ ಮಿತ್ತಲ್‌ ಅವರು, ‘ಕೇರಳ ಪುನರ್‌ ನಿರ್ಮಾಣಕ್ಕೆ ಕೈಜೋಡಿಸಲು ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಬದ್ಧರಾಗಿದ್ದೇವೆ. ರಾಜ್ಯದಲ್ಲಿ ನಾಶವಾಗಿರುವ ಮೂಲಸೌಕರ್ಯ ಪುನರ್‌ ಸ್ಥಾಪಿಸಲು ಎಲ್ಲ ರೀತಿಯಲ್ಲೂ ಇನ್ನಷ್ಟು ನೆರವು ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.