ADVERTISEMENT

ಡಿಸೆಂಬರ್ 12ರ 'ಮಹಿಳಾ ಶಕ್ತಿ ಪಾದಯಾತ್ರೆ'ಗೆ ಸೋನಿಯಾ: ಜೈರಾಂ ರಮೇಶ್

ಪಿಟಿಐ
Published 9 ಡಿಸೆಂಬರ್ 2022, 13:11 IST
Last Updated 9 ಡಿಸೆಂಬರ್ 2022, 13:11 IST
   

ನವದೆಹಲಿ: ಸದ್ಯ ರಾಜಸ್ಥಾನದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆಗೆ ಸೋಮವಾರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್ ತಿಳಿಸಿದ್ದಾರೆ.

ಅಂದು ‘ಮಹಿಳಾ ಶಕ್ತಿ ಪಾದಯಾತ್ರೆ’ ಹಿನ್ನೆಲೆಯಲ್ಲಿ ಸೋನಿಯಾ ಹೆಜ್ಜೆ ಹಾಕಬಹುದು ಎಂದು ಅವರು ತಿಳಿಸಿದ್ದಾರೆ.

ಇಂದು ಸೋನಿಯಾ ಗಾಂಧಿಯವರ 76ನೇ ಹುಟ್ಟುಹಬ್ಬವಾಗಿದ್ದು, ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆ ಅವರು ರಾಜಸ್ಥಾನದಲ್ಲೇ ಸಮಯ ಕಳೆದಿದ್ದಾರೆ.

ADVERTISEMENT

ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೈರಾಂ ರಮೇಶ್, ಆರ್ಥಿಕ ಸಂಕಷ್ಟ ಮತ್ತು ಏಕತೆ ಸಂದೇಶ ಕುರಿತಾದ ಎರಡು ವಿಡಿಯೊಗಳನ್ನು ಬಿಡುಗಡೆ ಮಾಡಿದರು.

‘ಭಾರತ್ ಜೋಡೊ ಯಾತ್ರೆಯಲ್ಲಿ ಆರ್ಥಿಕ ಅಸಮಾನತೆ, ಸಾಮಾಜಿಕ ಧೃವೀಕರಣ ಮತ್ತು ರಾಜಕೀಯ ಸರ್ವಾಧಿಕಾರಿ ಧೋರಣೆ ಕುರಿತಂತೆ ಬೆಳಕು ಚೆಲ್ಲಲಾಗುತ್ತಿದೆ’ಎಂದು ಅವರು ಹೇಳಿದರು.

‘ಸೋನಿಯಾ ಅವರು 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ಧಾರೆ. ನಾನು, ಪಕ್ಷ ಮತ್ತು ದೇಶದ ಜನತೆ ಅವರಿಗೆ ಆರೋಗ್ಯಕರ ದೀರ್ಘಾಯುಷ್ಯಕ್ಕೆ ಹಾರೈಸಿದ್ದೇವೆ. ಡಿಸೆಂಬರ್ 12ರ ಪಾದಯಾತ್ರೆಗೆ ಅವರು ಸೇರಿಕೊಳ್ಳಬಹುದು’ ಎಂದು ರಮೇಶ್ ಹೇಳಿದರು.

ಅಕ್ಟೋಬರ್‌ನಲ್ಲಿ ಮಂಡ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ, ರಾಹುಲ್ ಜೊತೆ ಹೆಜ್ಜೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.