ADVERTISEMENT

ಕೊರೊನಾ ಸೋಂಕು, ಲಸಿಕೆ ನಿರ್ವಹಣೆ: ಮಾಹಿತಿ ಪಡೆದ ಸೋನಿಯಾ

ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆ

ಪಿಟಿಐ
Published 10 ಏಪ್ರಿಲ್ 2021, 8:08 IST
Last Updated 10 ಏಪ್ರಿಲ್ 2021, 8:08 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಶನಿವಾರ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕೋವಿಡ್‌- 19 ಎರಡನೇ ಅಲೆಯ ಸ್ಥಿತಿ ಹಾಗೂ ಲಸಿಕೆ ಅಭಿಯಾನ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.

ವರ್ಚುವಲ್ ಸಭೆ ಮೂಲಕ ಕಾಂಗ್ರೆಸ್‌ ಆಡಳಿತವಿರುವ ಹಾಗೂ ಮೈತ್ರಿ ಪಕ್ಷಗಳೊಂದಿಗೆ ಕಾಂಗ್ರೆಸ್‌ ಅಧಿಕಾರ ಹಂಚಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರೊಂದಿಗೆ ಸೋನಿಯಾ ಗಾಂಧಿ ಮಾತನಾಡಿದರು. ‘ಕೊರೊನಾ ಸೋಂಕಿನ ವಿಚಾರದಲ್ಲಿ ಸೋಂಕು ಪರೀಕ್ಷೆ, ಸೋಂಕಿತರ ಪತ್ತೆ ಮತ್ತು ಲಸಿಕೆ ಹಾಕುವುದಕ್ಕೆ ಆದ್ಯತೆ ನೀಡಿ‘ ಎಂದು ಸಲಹೆ ನೀಡಿದರು.

‘ಇದೇ ವೇಳೆ ‌ಲಸಿಕೆಗಳ ಲಭ್ಯತೆ, ಔಷಧ ಮತ್ತು ವೆಂಟಿಲೇಟರ್‌ಗಳ ಲಭ್ಯತೆಯ ಬಗ್ಗೆ ಮಾಹಿತಿ ಪಡೆದುಕೊಂಡರು‘ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದರು.

ADVERTISEMENT

ಈ ಕುರಿತು ಟ್ವೀಟ್‌ ಮಾಡಿರುವ ಸೋನಿಯಾ ಗಾಂಧಿ, ‘ಕೋವಿಡ್‌– 19 ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಪರೀಕ್ಷೆ ಮಾಡಿ, ಸೋಂಕಿತರನ್ನು ಪತ್ತೆ ಮಾಡಿ ಮತ್ತು ಲಸಿಕೆ ಹಾಕುವುದಕ್ಕೆ ಆದ್ಯತೆ ನೀಡಿ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.