ADVERTISEMENT

‘ಇಂಡಿ’ ಬಣದಿಂದ ಬಹುಸಂಖ್ಯಾತರನ್ನು 2ನೇ ದರ್ಜೆ ಪ್ರಜೆಗಳನ್ನಾಗಿ ಮಾಡಲು ಯತ್ನ: ಮೋದಿ

ಪಿಟಿಐ
Published 26 ಮೇ 2024, 11:12 IST
Last Updated 26 ಮೇ 2024, 11:12 IST
 ಪ್ರಧಾನಿ ನರೇಂದ್ರ ಮೋದಿ
 ಪ್ರಧಾನಿ ನರೇಂದ್ರ ಮೋದಿ   

ಮೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶವನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ ನಿರ್ಲಕ್ಷಿಸಿವೆ. ಅಲ್ಲದೆ, ಅದನ್ನು ಮಾಫಿಯಾ, ಬಡತನ ಮತ್ತು ಅಸಹಾಯಕತೆಯ ಪ್ರದೇಶವನ್ನಾಗಿ ಪರಿವರ್ತಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಜಿಲ್ಲೆಯ ಘೋಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪೂರ್ವಾಂಚಲದಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಕಾಂಗ್ರೆಸ್‌ ಘೋಷಿಸಿತು ಹಾಗೂ ಅಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದೆ. ಬಹುಸಂಖ್ಯಾತ ಸಮುದಾಯವನ್ನು ದೇಶದ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ‘ಇಂಡಿಯಾ’ ಮೈತ್ರಿಕೂಟ ಬಯಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್‌ಪಿ ಮತ್ತು ಕಾಂಗ್ರೆಸ್‌ ಕುಟುಂಬಗಳು ತಮ್ಮ ವಂಶಪಾರಂಪರ್ಯ ಆಡಳಿತದ ಮನಸ್ಥಿತಿಯಿಂದ ಪೂರ್ವಾಂಚಲ ಪ್ರದೇಶವನ್ನು ಮಾಫಿಯಾ, ಬಡತನ ಮತ್ತು ಅಸಹಾಯಕತೆಯ ಪ್ರದೇಶವನ್ನಾಗಿ ಪರಿವರ್ತಿಸಿವೆ ಎಂದು ಮೋದಿ ಹೇಳಿದ್ದಾರೆ.

ADVERTISEMENT

ಜನರ ಮನೆಗಳಿಗೆ ಬೆಂಕಿ ಹಚ್ಚಿ, ಜನರ ಭೂಮಿಯನ್ನು ಅತಿಕ್ರಮಿಸಿಕೊಂಡು, ಗಲಭೆಕೋರರಿಗೆ ಉತ್ತೇಜನ ನೀಡಿ ‘ಇಂಡಿಯಾ’ ಮೈತ್ರಿಕೂಟವನ್ನು ಸೇರಿಕೊಂಡಿರುವ ನಾಯಕರಿಗೆ ಪೂರ್ವಾಂಚಲಗೆ ಕಾಲಿಡಲು ಬಿಡಬಾರದು ಎಂದು ಅವರು ತಿಳಿಸಿದ್ದಾರೆ.

ಎನ್‌ಡಿಎ ಪಾಲುದಾರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷವು (ಎಸ್‌ಬಿಎಸ್‌ಪಿ) ಅರವಿಂದ್ ರಾಜ್‌ಭರ್ ಅವರನ್ನು ಘೋಸಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಬಿಜೆಪಿಯು ಕ್ರಮವಾಗಿ ಬಲ್ಲಿಯಾ ಮತ್ತು ಸೇಲಂಪುರ ಲೋಕಸಭಾ ಕ್ಷೇತ್ರದಿಂದ ನೀರಜ್ ಶೇಖರ್ ಮತ್ತು ರವೀಂದ್ರ ಕುಶ್ವಾಹ ಅವರನ್ನು ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.