ADVERTISEMENT

ಧಾರ್ಮಿಕ ಸಾಮರಸ್ಯ ಉತ್ತೇಜಿಸಲು ಎಸ್‌ಪಿಯಿಂದ ‘ಹೋಳಿ–ಈದ್‌ ಮಿಲನ್‌’ ಕಾರ್ಯಕ್ರಮ

ಪಿಟಿಐ
Published 10 ಏಪ್ರಿಲ್ 2025, 5:43 IST
Last Updated 10 ಏಪ್ರಿಲ್ 2025, 5:43 IST
<div class="paragraphs"><p>‘ಹೋಳಿ–ಈದ್‌ ಮಿಲನ್‌’ ಕಾರ್ಯಕ್ರಮ</p></div>

‘ಹೋಳಿ–ಈದ್‌ ಮಿಲನ್‌’ ಕಾರ್ಯಕ್ರಮ

   

ಪಿಟಿಐ ಚಿತ್ರ

ಲಖನೌ: ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸಲು ಸಮಾಜವಾದಿ ಪಕ್ಷವು ಇಂದು (ಗುರುವಾರ) ‘ಹೋಳಿ–ಈದ್‌ ಮಿಲನ್‌’ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಲಖನೌನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮುಖ್ಯ ಅತಿಥಿಯಾಗಿದ್ದಾರೆ.

ಈ ಸಮಾರಂಭವು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಸೇರಿದಂತೆ ವಿವಿಧ ಧರ್ಮಗಳ ಧಾರ್ಮಿಕ ನಾಯಕರನ್ನು ಒಟ್ಟುಗೂಡಿಸಿದೆ ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಮ್ಮ ದೇಶ ಗಂಗಾ-ಯಮುನಾ ಸಂಸ್ಕೃತಿಯ ದೇಶ. ನಾವೆಲ್ಲರೂ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತೇವೆ. ಸಹೋದರತ್ವ ಮತ್ತು ಸಾಮರಸ್ಯ ನಮ್ಮ ಸಮಾಜದ ಶಕ್ತಿಗಳಾಗಿವೆ. ಇಂದಿನ ಕಾರ್ಯಕ್ರಮವು ಆ ಸಾಮರಸ್ಯ , ಏಕತೆ ಮತ್ತು ಸಹೋದರತ್ವದ ಸಂಗಮವಾಗಿದೆ ಎಂದು ಅಖಿಲೇಶ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.