ADVERTISEMENT

ಸಂಸತ್ ವಿಶೇಷ ಅಧಿವೇಶನ: ನಮ್ಮ ಸಾಮರ್ಥ್ಯಕ್ಕೆ ವಿಶ್ವವೇ ಬೆರಗಾಗುತ್ತಿದೆ– ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2023, 6:43 IST
Last Updated 18 ಸೆಪ್ಟೆಂಬರ್ 2023, 6:43 IST
<div class="paragraphs"><p>ಮೋದಿ</p></div>

ಮೋದಿ

   

ನವದೆಹಲಿ: ಈ ಅಮೃತ ಕಾಲದಲ್ಲಿ ಹುಮ್ಮಸ್ಸು, ನವ ಉತ್ಸಾಹ, ಹೊಸ ಸಂಕಲ್ಪದೊಂದಿಗೆ ನೂತನ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ನಮ್ಮ ಹೊಸ ಸಾಮರ್ಥ್ಯಕ್ಕೆ ಇಡೀ ವಿಶ್ವವೇ ಬೆರಗಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೋಮವಾರದಿಂದ ಆರಂಭವಾದ ಸಂಸತ್ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು.

ಹಳೆ ಸಂಸತ್ ಭವನದಲ್ಲಿ ನಡೆಯಲಿರುವ ಕೊನೆಯ ಅಧಿವೇಶನ ಐತಿಹಾಸಿಕವಾಗಲಿದೆ. ಈ ಹಳೆಯ ಭವನವು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹಳೆಯ ಸಂಸತ್ ಭವನ ನಿರ್ಮಾಣದಲ್ಲಿ ಭಾರತೀಯರ ಬೆವರು, ಪರಿಶ್ರಮವಿದೆ. ಹಣ ಕೂಡ ನಮ್ಮ ದೇಶದವರದ್ದು. ಹೀಗಾಗಿ ಈ ಹಳೆಯ ಸಂಸತ್ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದರು.

ಚಂದ್ರಯಾನವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಹೊಸ ತಂತ್ರಜ್ಞಾನ, ನಮ್ಮ ವಿಜ್ಞಾನಿಗಳ ಸಾಮರ್ಥ್ಯ, ಸಂಕಲ್ಪ ಶಕ್ತಿಯಿಂದ ಯಶಸ್ವಿಯಾಗಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.