ADVERTISEMENT

ಈ ಬಾಲಕಿಯ ಇಂಗ್ಲಿಷ್‌ ಭಾಷಣ ಕೇಳಿದ್ರೆ, ನೀವು ಕೂಡ ನಿಬ್ಬೆರಗಾಗುತ್ತೀರಾ!

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 10:10 IST
Last Updated 30 ಜನವರಿ 2019, 10:10 IST
ಭಾಷಣ ಮಾಡುತ್ತಿರುವ ಬಾಲಕಿ
ಭಾಷಣ ಮಾಡುತ್ತಿರುವ ಬಾಲಕಿ   

ಹೈದರಾಬಾದ್‌: ತೆಲಂಗಾಣದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಗಣರಾಜ್ಯೋತ್ಸವದಿನದಂದು ಇಂಗ್ಲಿಷ್‌ನಲ್ಲಿ ಭಾಷಣ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಿರುವ ವಿದ್ಯಾರ್ಥಿನಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಮೂಲಕ ಅವರಂತೆ ನಾವು ಕೂಡ ಉದಾತ್ತ ದ್ಯೆಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತನ್ನ ಸಹಪಾಠಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಭಾಷಣ ಮಾಡಿದ ಬಾಲಕಿಯುಕರೀಂನಗರದ ಮಂಡಲ್‌ ಪ್ರಾಂತ್ಯದ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.

ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್‌ ಆಗಿದ್ದು 400ಕ್ಕೂ ಹೆಚ್ಚು ಶೇರ್ ಆಗಿದೆ. 60ಕ್ಕೂ ಹೆಚ್ಚು ಜನರು ಕಮೆಂಟ್‌ ಮಾಡಿದ್ದಾರೆ.

ಹಿಂಜರಿಕೆ ಇಲ್ಲದೆ ಸ್ಪಷ್ಟವಾಗಿ ಮಾತನಾಡಿರುವ ಬಾಲಕಿಗೆನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಹಾಗೇ ಭಾಷಣವನ್ನು ಕಲಿಸಿದ ಶಿಕ್ಷಕರಿಗೂ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.