ADVERTISEMENT

ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯ, ಮಾಜಿ ಸಂಸದ ಛೋಟೆ ಸಿಂಗ್ ಯಾದವ್ ನಿಧನ ​

ಪಿಟಿಐ
Published 14 ಜೂನ್ 2025, 3:01 IST
Last Updated 14 ಜೂನ್ 2025, 3:01 IST
<div class="paragraphs"><p>ಛೋಟೆ ಸಿಂಗ್ ಯಾದವ್ </p></div>

ಛೋಟೆ ಸಿಂಗ್ ಯಾದವ್

   

(ಚಿತ್ರಕೃಪೆ–ಎಕ್ಸ್‌)

ಕನೌಜ್ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯ, ಮಾಜಿ ಸಂಸದ ಛೋಟೆ ಸಿಂಗ್ ಯಾದವ್(82) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಲಖನೌದ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಇವರ ನಿಧನಕ್ಕೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಂತಾಪ ಸೂಚಿಸಿದ್ದಾರೆ. 'ಸಹಕಾರಿ ಚಳವಳಿಯ ಪ್ರವರ್ತಕ, ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯ , ಕನೌಜ್‌ನ ಮಾಜಿ ಸಂಸದ ಛೋಟೆ ಸಿಂಗ್ ಯಾದವ್ ಅವರ ನಿಧನದ ಸುದ್ದಿ ತೀವ್ರ ದುಃಖಕರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಖಿಲೇಶ್ ಅವರು, ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಸಿಂಗ್ ಅವರ ಆರೋಗ್ಯ ವಿಚಾರಿಸಿದ್ದರು.

ಛೋಟೆ ಸಿಂಗ್ ಅವರು, 1980, 1989 ಮತ್ತು 1991ರಲ್ಲಿ ಕನೌಜ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲದೇ ಛಿಬ್ರಮೌದ ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.