ADVERTISEMENT

ಶ್ರೀನಗರದಲ್ಲಿ ಉಷ್ಣಾಂಶ ದಾಖಲೆ ಪ್ರಮಾಣದ ಕುಸಿತ

ಪಿಟಿಐ
Published 24 ಡಿಸೆಂಬರ್ 2018, 19:10 IST
Last Updated 24 ಡಿಸೆಂಬರ್ 2018, 19:10 IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಕುಸಿತವಾಗಿದ್ದು, – 6.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಹನ್ನೊಂದು ವರ್ಷಗಳಲ್ಲಿ ಇಷ್ಟು ಕಡಿಮೆ ಉಷ್ಣಾಂಶ ದಾಖಲಾಗಿದ್ದು ಇದೇ ಮೊದಲು.

ಶ್ರೀನಗರದಲ್ಲಿ ಡಿಸೆಂಬರ್‌ ತಿಂಗಳಲ್ಲಿ ಸಾರ್ವಕಾಲಿಕ ಕನಿಷ್ಠ ತಾಪಮಾನ ದಾಖಲಾಗಿದ್ದು 1934ರ ಡಿಸೆಂಬರ್‌ 13ರಂದು. ಆಗ –12.8 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು.

ADVERTISEMENT

ಪಹಾಲ್‌ಗಮ್‌ನಲ್ಲಿ –7.2 ಡಿಗ್ರಿ, ಗುಲ್‌ಮಾರ್ಗ್‌ನಲ್ಲಿ– 6.8 ಡಿಗ್ರಿ, ಕ್ವಾಜಿಗುಂಡ್‌ನಲ್ಲಿ ಮೈನಸ್‌ 5, ಉತ್ತರ ಕಾಶ್ಮೀರದ ಕುಪ್ವಾರದಲ್ಲಿ –6 ಡಿಗ್ರಿ, ಕಾರ್ಗಿಲ್‌ನಲ್ಲಿ – 15.3 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಶೀತ ಮಾರುತದ ಪರಿಣಾಮ ನೀರು ಮಂಜುಗಡ್ಡೆಯಾಗುತ್ತಿದ್ದು, ವಸತಿ ಪ್ರದೇಶಗಳಿಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.