ADVERTISEMENT

ಲಾಡು ಪ್ರಸಾದದಲ್ಲಿ ಕೀಟ: ಆರೋಪ ತಳ್ಳಿಹಾಕಿದ ಶ್ರೀಶೈಲ ದೇವಸ್ಥಾನ

ಪಿಟಿಐ
Published 1 ಜುಲೈ 2025, 18:51 IST
Last Updated 1 ಜುಲೈ 2025, 18:51 IST
–
   

ಶ್ರೀಶೈಲ(ಆಂಧ್ರಪ್ರದೇಶ): ದೇವಸ್ಥಾನದಲ್ಲಿ ವಿತರಿಸುವ ಲಾಡು ಪ್ರಸಾದದಲ್ಲಿ ಕೀಟ ಬಂದಿದೆ ಎಂಬ ಆರೋಪಗಳನ್ನು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ಮಂಗಳವಾರ ತಳ್ಳಿ ಹಾಕಿದೆ.

‘ಜೂನ್‌ 29ರಂದು ದೇವಸ್ಥಾನದ ಕೌಂಟರ್‌ವೊಂದರಲ್ಲಿ ಪಡೆದಿದ್ದ ಲಾಡು ಪ್ರಸಾದದಲ್ಲಿ ಕೀಟ ಕಂಡುಬಂದಿತ್ತು’ ಎಂದು ಕೆಲ ಭಕ್ತರು ಆರೋಪಿಸಿದ್ದರು. ಈ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡ ನಂತರ ಭಕ್ತರು ಆತಂಕ ವ್ಯಕ್ತಪಡಿಸಿದ್ದರಿಂದ ದೇವಸ್ಥಾನದಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.

‘ಲಾಡು ಪ್ರಸಾದದಲ್ಲಿ ಇದ್ದದ್ದು ಮಿಡತೆಯೇ ಹೊರತು ಜಿರಲೆ ಅಲ್ಲ ಎಂಬುದು ಪರೀಕ್ಷೆಯಿಂದ ತಿಳಿದುಬಂದಿದೆ. ಅದಾಗಲೇ ಚೂರಾಗಿದ್ದ ಲಾಡುವಿನಲ್ಲಿ ಮಿಡತೆಯನ್ನು ಉದ್ದೇಶಪೂರ್ವಕವಾಗಿ ಸೇರಿಸಿರುವಂತಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಶ್ರೀನಿವಾಸರಾವ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.