ADVERTISEMENT

ತಿರುಪತಿ: ಟೋಕನ್‌ ವಿತರಣೆ ಅವಧಿ ಬದಲು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 19:55 IST
Last Updated 18 ಡಿಸೆಂಬರ್ 2020, 19:55 IST
ತಿರುಪತಿ ದೇವಸ್ಥಾನ
ತಿರುಪತಿ ದೇವಸ್ಥಾನ   

ತಿರುಮಲ: ತಿರುಪತಿಯ ಅಲಿಪಿರಿ ಸಮೀಪದ ವಿಷ್ಣು ನಿವಾಸಂ ಮತ್ತು ಭೂದೇವಿ ಸಂಕೀರ್ಣದ ಕೌಂಟರ್‌ಗಳಲ್ಲಿ ನೀಡಲಾಗುತ್ತಿರುವ ಸರ್ವದರ್ಶನದ ಟೋಕನ್‌ಗಳ ಅವಧಿಯು ಇದೇ 21ರ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ ಎಂದು ತಿರುಮಲ
ತಿರುಪತಿ ದೇವಸ್ಥಾನಗಳ ಟ್ರಸ್ಟ್ (ಟಿಟಿಡಿ) ತಿಳಿಸಿದೆ.

ಡಿ. 22, 23 ಮತ್ತು 24ರ ದರ್ಶನದ ಟೋಕನ್‌ಗಳನ್ನು ಡಿ. 21 ಅಥವಾ ಅದಕ್ಕೂ ಮುನ್ನವೇ ನೀಡಲಾಗುತ್ತದೆ. ಈ ಬದಲಾವಣೆಯನ್ನು ಭಕ್ತರು ಗಮನಿಸಬೇಕು ಎಂದು ಎಂದು ಟಿಟಿಡಿ ಹೇಳಿದೆ.

ಕೋವಿಡ್‌ ನಿಯಾಮವಳಿಗಳನ್ನು ಅನುಸರಿಸಿ ಹಾಗೂ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಗಮನದಲ್ಲಿರಿಸಿಕೊಂಡು ಈ ವರ್ಷ ವೈಕುಂಠ ದ್ವಾರ ದರ್ಶನದ ಟೋಕನ್‌ಗಳು ಸ್ಥಳೀಯ ಭಕ್ತರಿಗೆ ಮಾತ್ರ ಸೀಮಿತವಾಗಿರುತ್ತವೆ. ಸ್ಥಳೀಯರಲ್ಲದವರು ತಿರುಪತಿಯ ಐದು ಕೇಂದ್ರಗಳಲ್ಲಿ ಆಧಾರ್ ಕಾರ್ಡ್‌ ದಾಖಲೆ ಸಲ್ಲಿಸಿ ಎಸ್‌ಎಸ್‌ಡಿ ದರ್ಶನದ ಟೋಕನ್‌ಗಳನ್ನು ಪಡೆಯಬಹುದು ಎಂದು ಟಿಟಿಡಿ ಸಾರ್ವಜನಿಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.