ADVERTISEMENT

ಮಧ್ಯ ಪ್ರದೇಶದ ಸತ್‌ನಾದಲ್ಲಿ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಹೆಸರು

ಐಎಎನ್ಎಸ್
Published 13 ಫೆಬ್ರುವರಿ 2022, 8:24 IST
Last Updated 13 ಫೆಬ್ರುವರಿ 2022, 8:24 IST
ಮಧ್ಯ ಪ್ರದೇಶದ ವಿಧಾನಸಭೆ ಸ್ಪೀಕರ್ ಗಿರೀಶ್ ಗೌತಮ್ ಮತ್ತು ಸತ್‌ನಾ ಸಂಸದ ಗಣೇಶ್ ಸಿಂಗ್ ಅವರು ‘ನರೇಂದ್ರ ದಾಮೋದರ ದಾಸ್ ಮೋದಿ ಸ್ಟೇಡಿಯಂ’ ಅನ್ನು ಶನಿವಾರ ಉದ್ಘಾಟಿಸಿದರು – ಐಎಎನ್‌ಎಸ್‌ ಚಿತ್ರ
ಮಧ್ಯ ಪ್ರದೇಶದ ವಿಧಾನಸಭೆ ಸ್ಪೀಕರ್ ಗಿರೀಶ್ ಗೌತಮ್ ಮತ್ತು ಸತ್‌ನಾ ಸಂಸದ ಗಣೇಶ್ ಸಿಂಗ್ ಅವರು ‘ನರೇಂದ್ರ ದಾಮೋದರ ದಾಸ್ ಮೋದಿ ಸ್ಟೇಡಿಯಂ’ ಅನ್ನು ಶನಿವಾರ ಉದ್ಘಾಟಿಸಿದರು – ಐಎಎನ್‌ಎಸ್‌ ಚಿತ್ರ   

ಭೋಪಾಲ್: ಗುಜರಾತ್ ಬಳಿಕ ಇದೀಗ ಮಧ್ಯ ಪ್ರದೇಶದ ಸತ್‌ನಾದಲ್ಲಿಯೂ ಕ್ರೀಡಾಂಗಣವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಇಡಲಾಗಿದೆ.

ಕ್ರೀಡಾಂಗಣವನ್ನು ಸತ್‌ನಾದ ಪವರ್ ಗ್ರಿಡ್ ಕಾರ್ಪೊರೇಷನ್₹130 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ.

ಮಧ್ಯ ಪ್ರದೇಶದ ವಿಧಾನಸಭೆ ಸ್ಪೀಕರ್ ಗಿರೀಶ್ ಗೌತಮ್ ಮತ್ತು ಸತ್‌ನಾ ಸಂಸದ ಗಣೇಶ್ ಸಿಂಗ್ ಅವರು ‘ನರೇಂದ್ರ ದಾಮೋದರ ದಾಸ್ ಮೋದಿ ಸ್ಟೇಡಿಯಂ’ ಅನ್ನು ಶನಿವಾರ ಉದ್ಘಾಟಿಸಿದ್ದಾರೆ.

ADVERTISEMENT

ಮೋದಿ ಸರ್ಕಾರವು ಕ್ರೀಡೆಯ ಉತ್ತೇಜನಕ್ಕೆ ಸಾಕಷ್ಟು ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಕ್ರೀಡಾಳುಗಳ ಜತೆ ನೇರ ಸಂಪರ್ಕದಲ್ಲಿದ್ದು ಅವರಿಗೆ ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿ ಕ್ರೀಡಾಂಗಣಕ್ಕೆ ಅವರ ಹೆಸರು ಇಡಲು ನಿರ್ಧರಿಸಿದ್ದೆವು ಎಂದು ಗಣೇಶ್ ಸಿಂಗ್ ಹೇಳಿದ್ದಾರೆ.

2021ರಲ್ಲಿ ಗುಜರಾತ್‌ನ ಮೊಟೆರಾ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.