ADVERTISEMENT

ಡಿಎಂಕೆ ಅಧ್ಯಕ್ಷರಾಗಿ ಎರಡನೇ ಅವಧಿಗೆ ಸ್ಟಾಲಿನ್ ಆಯ್ಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 15:40 IST
Last Updated 7 ಅಕ್ಟೋಬರ್ 2022, 15:40 IST
ಎಂ.ಕೆ. ಸ್ಟಾಲಿನ್
ಎಂ.ಕೆ. ಸ್ಟಾಲಿನ್   

ಚೆನ್ನೈ: ತಮಿಳುನಾಡಿನ ಆಡಳಿತಾರೂಢದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸಾಮಾನ್ಯ ಸಭೆ ಭಾನುವಾರ (ಅ.9) ನಡೆಯಲಿದ್ದು, ಪಕ್ಷದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಎಂ.ಕೆ.ಸ್ಟಾಲಿನ್ ಅವರು ಅವಿರೋಧವಾಗಿಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಪಕ್ಷದ ಹಿರಿಯ ನಾಯಕರಾದ ದೊರೈ ಮುರುಗನ್ ಮತ್ತು ಟಿ.ಆರ್. ಬಾಲು ಅವರು ಕ್ರಮವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಮೂವರೂ ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರಿಗೆ ಶುಕ್ರವಾರ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದು, ಪ್ರತಿ ಹುದ್ದೆಗೂ ಒಬ್ಬ ಅಭ್ಯರ್ಥಿಯೇ ಸ್ಪರ್ಧಿಸುತ್ತಿರುವುದರಿಂದ ಚುನಾವಣೆ ನಡೆಯುವುದಿಲ್ಲ.

ADVERTISEMENT

2018ರ ಆಗಸ್ಟ್ 7ರಂದು ಸ್ಟಾಲಿನ್ ಅವರ ತಂದೆ ಎಂ. ಕರುಣಾನಿಧಿ ಅವರು ನಿಧನರಾದ ಬಳಿಕ ಅದೇ ವರ್ಷ ಆಗಸ್ಟ್ 28ರಂದು ಡಿಎಂಕೆ ಅಧ್ಯಕ್ಷರಾಗಿ ಮೊದಲ ಅವಧಿಗೆ ಸ್ಟಾಲಿನ್ ಅವರು ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.