ADVERTISEMENT

ಚುನಾವಣೆ ಬಳಿಕ ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 21:11 IST
Last Updated 23 ಅಕ್ಟೋಬರ್ 2021, 21:11 IST
ಅಮಿತ್ ಶಾ
ಅಮಿತ್ ಶಾ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಗಡಿ ನಿರ್ಧಾರವಾಗಿ, ವಿಧಾನ ಸಭಾ ಚುನಾವಣೆಗಳು ಪೂರ್ಣ ಗೊಂಡ ಬಳಿಕ ರಾಜ್ಯದ ಸ್ಥಾನಮಾನ ವನ್ನು ಮರು ಸ್ಥಾಪಿಸಲಾಗು ತ್ತದೆ ಎಂದುಕೇಂದ್ರ ಗೃಹಸಚಿವಅಮಿತ್ ಶಾ ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿಗಾಗಿ ಶನಿವಾರ ಶ್ರೀನಗರಕ್ಕೆ ಆಗಮಿಸಿರುವ ಅವರು, ಯೂತ್ ಕ್ಲಬ್ ಸದಸ್ಯರ ಜತೆಗಿನ ಸಂವಾದದಲ್ಲಿ ಈ ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿಯುತ ಮತ್ತು ಅಭಿವೃದ್ಧಿ ಹೊಂದಿದ ಕಣಿವೆ ನಿರ್ಮಾಣ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾಶ್ಮೀರದ ಯುವಕರ ಬೆಂಬಲವನ್ನು ಶಾ ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.